ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದಲ್ಲಿ ಲೋಕದ ಸಕಲ ಜೀವಿಗಳ ಕಲ್ಯಾಣಾರ್ಥವಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಿಷ್ಠಾಚಾರ್ಯ ಶ್ರೀ ಜಯರಾಜ ಇಂದ್ರ ಹಾಗೂ ಇತರ ಪುರೋಹಿತ ವರ್ಗದಿಂದ ಶ್ರೀ ಕ್ಷೇತ್ರ ಚಂದ್ರಪುರ ಆಡಳಿತ ಮಂಡಳಿ ಹಾಗೂ ಶಿಶುಗಲಿ ರಾಣಿ ಕಾಳಲಾದೇವಿ ಮಹಿಳಾ ಸಮಾಜ ಶ್ರೀ ಕ್ಷೇತ್ರ ಚಂದ್ರಪುರ ಇವರ ನೇತೃತ್ವದಲ್ಲಿ ಕಲ್ಯಾಣ ಮಂದಿರ ಆರಾಧನೆಯು ನೆರವೇರಿತು.
ಭಗವಾನ್ 1008 ಶ್ರೀ ಪಾರ್ಶ್ವನಾಥ ಸ್ವಾಮಿ ಪ್ರಭುದೇವರ ಜಿನಬಿಂಬವನ್ನು ಅದ್ದೂರಿಯಾಗಿ ಮೆರವಣಿಗೆಯಲ್ಲಿ ತರಲಾಯಿತು. ನಂತರ ಸಾಮೂಹಿಕ ಕಲ್ಯಾಣ ಮಂದಿರ ಆರಾಧನೆ ನಡೆದು ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ವಿಶೇಷ ಪೂಜೆಯು ನೆರವೇರಿತು.
ಈ ಸಂದರ್ಭದಲ್ಲಿ ದಾನಿಗಳಾದ ವಿಜಯಕುಮಾರ್ ಕಣಿಯೂರು, ಸುರೇಂದ್ರ ಹೆಗ್ಡೆ ಕಣಿಯೂರು, ಶ್ರೀಮತಿ ಶಶಿಪ್ರಭಾ ಅಹಿಂಸ ಉಜಿರೆ ಅವರನ್ನು ಆಡಳಿತ ಮಂಡಳಿಯವರು ಗೌರವಿಸಿದರು.
ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಶಿಶುಗಲಿ ರಾಣಿ ಕಾಳಲಾದೇವಿ ಮಹಿಳಾ ಸಮಾಜದ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.