ಕೊಕ್ಕಡ: ಸತತವಾಗಿ 3ನೇ ಭಾರಿಗೆ ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಇತಿಹಾಸ ನಿರ್ಮಿಸಿದ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಜೀಯವರ ಅಧಿಕಾರವಧಿಯಲ್ಲಿ ಆಯುರಾರೋಗ್ಯ ಲಭಿಸಲಿ ಎಂದು ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ಸನ್ನಿಧಾನದಲ್ಲಿ 120 ಅಗೇಲು ರಂಗಪೂಜೆ ಸೇವೆಯನ್ನು ಜೂ.10 ರಂದು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಯೋಗೀಶ್ ಆಲಂಬಿಲ, ಎಸ್.ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿಠಲ ಕುರ್ಲೆ, ಕೊಕ್ಕಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಬಿ, ಗ್ರಾ.ಪಂ. ಉಪಾಧ್ಯಕ್ಷ ಪ್ರಭಾಕರ ಗೌಡ ಮಲ್ಲಿಗೆ ಮಜಲು, ಸದಸ್ಯರಾದ ಜಾನಕಿ, ಲತಾ, ಪುರುಷೋತ್ತಮ, ಶಕ್ತಿಕೇಂದ್ರದ ಪ್ರಮುಖ ಪ್ರಶಾಂತ್ ಪೂವಾಜೆ, ಬೂತ್ 1ರ ಸಮಿತಿ ಅಧ್ಯಕ್ಷ ಕಿರಣ್, ಕಾರ್ಯದರ್ಶಿ ರವಿ, ಬೂತ್ 2ರ ಸಮಿತಿ ಅಧ್ಯಕ್ಷ ಶಶಿ, ಕಾರ್ಯದರ್ಶಿ ಶ್ರೀಧರ್, ಬೂತ್ 3ರ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ, ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಪವಿತ್ರ ಗುರುಪ್ರಸಾದ್, ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ, ಸುಬ್ರಮಣ್ಯ ತೋಡ್ತಿಲ್ಲಾಯ ಹಾಗೂ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಮುಖರು, ಬಿಜೆಪಿ ಕಾರ್ಯಕರ್ತರು, ಉಪಸ್ಥಿತರಿದ್ದರು.