ಕೊಕ್ಕಡ: ಅಮೃತ ಗ್ರಾಮ ಯೋಜನೆಯ ಅಡಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳು ಸರಕಾರಿ ಅಂಗನವಾಡಿಗಳಿಗೆ 4 ಲಕ್ಷ ವೆಚ್ಚದಲ್ಲಿ ಆಟದ ಸಾಮಾನುಗಳ ಅಳವಡಿಕೆ ಕಾರ್ಯ ನಡೆಯಿತು.
ಅಮೃತ ಗ್ರಾಮ ಯೋಜನೆಯ ಅಡಿಯಲ್ಲಿ ಕೊಕ್ಕಡ ಪಂಚಾಯಿತಿನ ವತಿಯಿಂದ ಕೊಕ್ಕಡ, ಬೋಳದಬೈಲು, ಪಿಜಿನಡ್ಕ, ಹಳ್ಳಿಗೇರಿ, ಉಪ್ಪಾರಪಳಿಕೆ, ಮುಂಡೂರುಪಳಿಕೆ, ಸೌತಡ್ಕ ಸೇರಿದಂತೆ ಏಳು ಅಂಗನವಾಡಿಗಳಿಗೆ 4ಲಕ್ಷ ವೆಚ್ಚದಲ್ಲಿ ಉಯ್ಯಾಲೆ, ಜಾರುಬಂಡಿ ಮುಂತಾದ ಆಟಿಕೆ ವಸ್ತುಗಳನ್ನು ಅಳವಡಿಸಲಾಯಿತು.