ಇತ್ತೀಚೆಗಷ್ಟೇ ಬಿಡುಗಡೆಯಾದ ‘ಯುವ’ ಸಿನಿಮಾ ಮೂಲಕ ಸುದ್ದಿಯಾಗಿದ್ದ ದೊಡ್ಮನೆ ಕುಡಿ ಇದೀಗ ದಾಂಪತ್ಯದಲ್ಲಿನ ಬಿರುಕು ಹಾಗೂ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೌದು, ನಟ ಯುವ ರಾಜಕುಮಾರ್ ಅವರ ಐದು ವರ್ಷದ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ವರದಿ ಆಗಿದೆ.
ವರನಟ ಡಾ.ರಾಜಕುಮಾರ್ ಮೊಮ್ಮಗ ಹಾಗೂ ನಟ ರಾಘವೇಂದ್ರ ರಾಜಕುಮಾರ್ ಪುತ್ರ ನಟ ಯುವ ರಾಜಕುಮಾರ್ ಅವರು 2019ರಲ್ಲಿ ಶ್ರೀದೇವಿ ಅವರೊಂದಿಗೆ ಮದುವೆ ಆಗಿದ್ದರು. ವೈಯಕ್ತಿಕ ಕಾರಣಗಳಿಂದ ಅವರ ಐದು ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಈ ಸಂಬಂಧ ಪತ್ನಿಗೆ ಯುವ ಅವರು ನೋಟಿಸ್ ನೀಡಿದ್ದಾರೆ.
ಸದ್ಯ ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿಯವರು ವಿದೇಶದಲ್ಲಿದ್ದಾರೆ. ಆರು ತಿಂಗಳ ಹಿಂದೆ ಶ್ರೀದೇವಿಯಿಂದ ವಿಚ್ಛೇದನಕ್ಕೆ ಕೋರಿ ಯುವ ರಾಜಕುಮಾರ್ ಅವರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಪ್ರಕ್ರಿಯೆಯಂತ ಇದೀಗ ಪತ್ನಿಗೆ ನೋಟಿಸ್ ಜಾರಿಯಾಗಿದೆ.
ದೊಡ್ಮನೆ ಕುಟುಂಬದಲ್ಲಿ ಇದು ಮೊದಲ ವಿಚ್ಛೇದನ
ದಾಂಪತ್ಯ ಕಲಹ ವಿಚಾರ, ವಿಚ್ಛೇದನ ವಿಚಾರವಾಗಿ ಮೇರು ನಟ ಡಾ.ರಾಜಕುಮಾರ್ ಕುಟುಂಬದಲ್ಲಿ ಮುನ್ನೆಲೆಗೆ ಬಂದ ಮೊದಲ ನಟ ಎನ್ನಬಹುದಾಗಿದೆ. ಈ ವರೆಗೆ ಅವರ ಕುಟುಂಬದಲ್ಲಿ ಈ ವಿಚಾರವಾಗಿ ಯಾರೊಬ್ಬರು ಮುನ್ನೆಲೆ ಬಂದಿಲ್ಲ.
ಸದ್ಯ ಯುವ ರಾಜಕುಮಾರ್ ಪತ್ನಿಯಿಂದ ದೂರುವಾಗುವ (ಡಿವೋರ್ಸ್) ವಿಚಾರ ತಿಳಿದ ಡೊಡ್ಮನೆ ಕುಟುಂಬದ ಹಾಗೂ ಯುವ ರಾಜಕುಮಾರ್ ಅವರು ಅಭಿಮಾನಿಗಳಿಗೆ ಭರಸಿಡಿಲು ಬಡಿದಂತಾಗಿದೆ.
ನಟ ಯುವರಾಜ್ ಕುಮಾರ್ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ಅವರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಇವರಿಬ್ಬರು ವಿವಾಹವು ಅದ್ಧೂರಿಯಾಗಿ 2019ರ ಮೇ 25ರಂದು ನಡೆದಿತ್ತು. ಇಬ್ಬರು ಒಪ್ಪಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ 07 ವರ್ಷಗಳ ಪ್ರೀತಿಗೆ ಹಾಗೂ 04 ವರ್ಷಗಳ ವೈವಾಹಿಕ ಜೀವನದಿಂದ ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಮೂಲಕ ದೊಡ್ಮನೆಯ ಕುಟುಂಬದ ದಂಪತಿಗಳು ಬೇರೆಯಾಗುತ್ತಿರುವ ಇವರೇ ಮೊದಲಿಗರು.
ಯುವ-ಶ್ರೀದೇವಿ ವಿಚ್ಛೇದನಕ್ಕೆ ಕಾರಣವೇನು?
ಯುವ ರಾಜಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಅವರು ಮೂಲತಃ ಮೈಸೂರು ಮೂಲದವರು. ಇವರಿಬ್ಬರು ಮದುವೆ ಆಗಿ ನಾಲ್ಕು ವರ್ಷಗಳಾಗಿದ್ದು, ಇದೀಗ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಯುವರಾಜ್ ಕುಮಾರ್ ಜೂನ್ 6 ರಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಉನ್ನತ ಶಿಕ್ಷಣದ ಕನಸು ಇಟ್ಟುಕೊಂಡಿರುವ ಶ್ರೀದೇವಿ ಅವರು ವಿದೇಶದಲ್ಲಿದ್ದಾರೆ. ಭಾರತದ ತೊರೆದು ಕೆಲವು ತಿಂಗಳು ಆಗಿವೆ ತಿಳಿದು ಬಂದಿದೆ. ವಿದ್ಯಾಭ್ಯಾಸ ಕಾರಣಕ್ಕೊ? ಇಲ್ಲವೇ ವೈಯಕ್ತಿಕ ಕಾರಣಗಳಿಗೋ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿತೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟನೆ ಸಿಗುವ ವಿಶ್ವಾಸವಿದೆ.
ಅಗೌರವ, ಮಾನಸಿಕ ಕ್ರೌರ್ಯ ಎಂದು ಯುವ ಆರೋಪ
ಸದ್ಯ ಒಂದೇ ಬದಿಯಲ್ಲಿ ಡಿವೋರ್ಸ್ ವಿಚಾರ ಕೇಳಿ ಬರುತ್ತಿವೆ. ಈ ವಿಚಾರ ಬಗ್ಗೆ ಸ್ಪಷ್ಟನೆಗಾಗಿ ಶ್ರೀದೇವಿ ಅವರಿಗೆ ಕರೆ ಮಾಡಿದ ಮಾಧ್ಯಮದವರಿಗೆ ಯಾವ ಸ್ಪಂದನೆ ಸದ್ಯದವರೆಗೂ ಸಿಕ್ಕಿಲ್ಲ.
ಮತ್ತೊಂದೆಡೆ ಯುವ ರಾಜ್ ಕುಮಾರ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಪತ್ನಿ ವಿರುದ್ಧ ಕೆಲವು ಆರೋಪ ಮಾಡಿದ್ದಾರೆ. ಪತ್ನಿ ಮನೆಯಲ್ಲಿ ಅಗೌರವ ತೋರುತ್ತಾರೆ. ಮಾನಸಿಕವಾಗಿ ಕ್ರೌರ್ಯ ಎಂದೆಲ್ಲ ಅವರು ಆರೋಪಿಸಿದ್ದಾರೆ. ಈ ಕಾರಣದಿಂದ ಯುವ ರಾಜಕುಮಾರ್ ನೊಂದಿದ್ದಾರೆ. ಹೀಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಸದ್ಯದ ಮಾಹಿತಿ.
ಯುವ ಮತ್ತು ಶ್ರೀದೇವಿ ವಿಚ್ಛೇದನ ವಿಚಾರವಾಗಿ ಇಂದು (ಜೂನ್ 10) ಮಧ್ಯಾಹ್ನ ಕುಟುಂಬಸ್ಥರಾದ ಯುವ ತಂದೆ ಹಿರಿಯ ನಟ ರಾಘವೇಂದ್ರ ರಾಜ್ಕುಮಾರ್, ಸಹೋದರ ನಟ ವಿನಯ್ ರಾಜಕುಮಾರ್ ಅವರಿಂದ ಸುದ್ದಿಗೋಷ್ಠಿ ನಡೆಯಲಿದೆ. ಈ ವೇಳೆ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಅವರು ಸಹ ಇರಲಿದ್ದಾರೆ.