ಉಪ್ಪಿನಂಗಡಿ ಜೇಸಿ ವತಿಯಿಂದ ಪರಿಸರ ದಿನಾಚರಣೆ

ಶೇರ್ ಮಾಡಿ

ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕದ ವತಿಯಿಂದ ಬುಳೇರಿಮೊಗ್ರು ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಿತು.

ಉಪ್ಪಿನಂಗಡಿ ಘಟಕ ಅಧ್ಯಕ್ಷೆ ಲವೀನಾ ಪಿಂಟೊ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಶಾಲಾ ಮುಖ್ಯೋಪಾಧ್ಯಾಯ ಕರುಣಾಕರ ಎಚ್. ಎಸ್ ಮತ್ತು ನಿವೃತ್ತ ಸೇನಾನಿ ಜೆ.ಕೆ ಪೂಜಾರಿ ಅಂಡೆತ್ತಡ್ಕ ಭಾಗವಹಿಸಿದ್ದರು.

ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಆಟದ ಮೈದಾನವನ್ನು ಅಗಲಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಧನಂಜಯ.ಪಿ.ಕಾರ್ಯಕ್ರಮ ನಿರೂಪಿಸಿದರು.ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುಕುಮಾರ್.ಕೆ ವಂದಿಸಿದರು.

Leave a Reply

error: Content is protected !!