ಆಧಾರ್‌ ಮತ್ತು ರೇಷನ್‌ ಕಾರ್ಡ್‌ ಲಿಂಕ್‌ ಅವಧಿ ಮತ್ತೆ 3 ತಿಂಗಳು ವಿಸ್ತರಣೆ: ಏನೆಲ್ಲಾ ದಾಖಲೆ ಬೇಕು

ಶೇರ್ ಮಾಡಿ

ಪಡಿತರ ಚೀಟಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಇನ್ನಷ್ಟು ರಿಲೀಫ್‌ ನೀಡಿದ್ದು, ಆಧಾರ್‌ ಮತ್ತು ರೇಷನ್‌ ಕಾರ್ಡ್‌ ನಂಬರ್‌ ಜೋಡಣೆ ಅವಧಿಯ ಗಡುವನ್ನು ಮತ್ತೊಮ್ಮೆ ವಿಸ್ತರಿಸಿರುವುದಾಗಿ ವರದಿ ತಿಳಿಸಿದೆ.

ಆಧಾರ್‌ ಮತ್ತು ರೇಷನ್‌ ಕಾರ್ಡ್‌ ಲಿಂಕ್‌ ಮಾಡಲು ಹೊಸ ಅವಧಿಯನ್ನು 2024ರ ಸೆಪ್ಟೆಂಬರ್‌ 30ರ ತನಕ ವಿಸ್ತರಿಸಲಾಗಿದೆ. ಈ ಮೊದಲು ಜೂನ್‌ 30ರವರೆಗೆ ಮಾತ್ರ ಗಡುವು ನೀಡಲಾಗಿತ್ತು.

ಆಧಾರ್‌ ಮತ್ತು ರೇಷನ್‌ ಕಾರ್ಡ್‌ ನಂಬರ್‌ ಜೋಡಣೆಗಾಗಿ ದಿನಾಂಕ ವಿಸ್ತರಿಸಿರುವ ಕುರಿತು ಫುಡ್‌ ಆಂಡ್‌ ಪಬ್ಲಿಕ್‌ ಡಿಸ್ಟ್ರಿಬ್ಯೂಷನ್‌ ಇಲಾಖೆ ಈ ಕುರಿತು ಪ್ರಕಟಣೆ ಹೊರಡಿಸಿದೆ ಎಂದು ವರದಿ ತಿಳಿಸಿದೆ.

ಆಧಾರ್‌ ಮತ್ತು ರೇಷನ್‌ ಕಾರ್ಡ್‌ ಲಿಂಕ್‌ ಮಾಡಲು ಇವಿಷ್ಟು ದಾಖಲೆಗಳು ಅಗತ್ಯ:
ರೇಷನ್‌ ಕಾರ್ಡ್‌ ಒರಿಜಿನಲ್‌ ಕಾಪಿ
ಕುಟುಂಬ ಸದಸ್ಯರ ಆಧಾರ್‌ ಕಾರ್ಡ್‌ ಫೋಟೊ ಕಾಪಿ
ಕುಟುಂಬದ ಯಜಮಾನನ ಆಧಾರ್‌ ಕಾರ್ಡ್‌
ಬ್ಯಾಂಕ್‌ ಪಾಸ್‌ ಬುಕ್‌ ಫೋಟೊ ಕಾಪಿ
ಕುಟುಂಬದ ಯಜಮಾನನ ಎರಡು ಪಾಸ್‌ ಪೋರ್ಟ್‌ ಸೈಜ್‌ ಫೋಟೊ

Leave a Reply

error: Content is protected !!