ಉದನೆ ಇಲ್ಲಿನ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಬಿಷಪ್ ಪೋಳಿಕಾರ್ಪೋಸ್ ಕಿಂಡರ್ ಗಾರ್ಡನ್ ನ ಎಲ್.ಕೆ.ಜಿ, ಯುಕೆಜಿ ಪ್ರವೇಶೋತ್ಸವ ಹಾಗೂ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.
ಬ್ಯಾಂಡ್, ವಾದ್ಯ ಘೋಷಗಳೊಂದಿಗೆ ಪುಟಾಣಿಗಳನ್ನು ಮೆರವಣಿಗೆಯಲ್ಲಿ ತರಗತಿಗೆ ಕರೆತರಲಾಯಿತು. ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಪುಟಾಣಿಗಳಿಗೆ ಅಕ್ಷರಾಭ್ಯಾಸ ಮಾಡಿಸಿ ಹರಸಿದರು. ಶಾಲಾ ಆಡಳಿತ ಅಧಿಕಾರಿ ಜಾನ್.ಕೆ.ಕೆ, ಸೈಂಟ್ ಆಂಟನೀಸ್ ಪ್ರೌಢ ಶಾಲೆಯ ಮುಖ್ಯಗುರು ಶ್ರೀಧರ ಗೌಡ, ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ನ ಮುಖ್ಯ ಗುರು ಯಶೋಧರ.ಕೆ ಪುಟಾಣಿಗಳಿಗೆ ಶುಭವನ್ನು ಕೋರಿದರು.
ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಪಾಲಕರು, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೆಜಿ ವಿಭಾಗದ ಮುಖ್ಯಸ್ಥೆ ವಿನೀತ ತಂಗಚ್ಚನ್ ಕಾರ್ಯಕ್ರಮ ನಿರೂಪಿಸಿದರು.