ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠದ ಎಂಬಲ್ಲಿಯ ವೃದ್ದೆಗೆ ನಾಗರ ಹಾವು ಕಡಿದು ಮೃತರಾದ 10 ದಿನದ ಬಳಿಕ ಮತ್ತೆ ಅದೇ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷವಾದ ಘಟನೆ ನಡೆದಿದೆ.
ಮಿತ್ತಮಜಲಿನ ದೇವಮ್ಮ(67) ಎಂಬವರು ಜೂ.3 ರಂದು ತಮ್ಮ ಮನೆಯಲ್ಲಿ ಕೋಳಿ ಕಾಪುವಿಗೆ ಕೈ ಹಾಕಿದ್ದ ವೇಳೆ ನಾಗರ ಹಾವು ಕಡಿತಕ್ಕೆ ತುತ್ತಾಗಿ ಆಸ್ಪತ್ರೆ ತಲುಪುವಷ್ಟರಲ್ಲಿ ದಾರಿ ಮದ್ಯೆ ಕೊನೆಯುಸಿರೆಳೆದಿದ್ದರು.
ಬುಧವಾರ ಅದೇ ಮನೆಯಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿದೆ. ಇದೇ ಹಾವು ಕಚ್ಚಿ ದೇವಮ್ಮ ಅವರು ನಿಧಾನರಾಗಿರುವುದಾಗಿ ನಂಬಲಾಗಿದೆ. ಸುಬ್ರಹ್ಮಣ್ಯದ ಮಾಧವ ಎಂಬವರನ್ನು ಕರೆಸಿ ನಾಗರ ಹಾವುನ್ನು ಹಿಡಿದು ಬಳಿಕ ಕಾಡಿಗೆ ಬಿಡಲಾಗಿದೆ