ಕಡಬ ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ 2024-25 ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಮತದಾನದ ಮೂಲಕ ನಡೆಯಿತು.
ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ವಂ.ಪ್ರಕಾಶ್ ಪಾವ್ಲ್ ಡಿಸೋಜ ಚುನಾವಣೆಗೆ ಚಾಲನೆಯನ್ನು ನೀಡಿ ಶುಭ ಹಾರೈಸಿದರು.
ಚುನಾವಣೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲದ ಮುಖಂಡನಾಗಿ ಮನ್ವಿತ್.ಕೆ, ಕಾರ್ಯದರ್ಶಿಯಾಗಿ ಸಿಲ್ವಿಯ ಟಿ.ಎಸ್, ಕ್ರೀಡಾ ಕಾರ್ಯದರ್ಶಿಯಾಗಿ ಮುಹಮ್ಮದ್ ಕನ್ಝ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಏ.ಲೋಕೇಶ್, ವಾಣಿಜ್ಯ ಸಂಘದ ಕಾರ್ಯದರ್ಶಿಯಾಗಿ ಹಯ್ಯನ್ ಖಾದರ್, ವಿಜ್ಞಾನ ಸಂಘದ ಕಾರ್ಯದರ್ಶಿಯಾಗಿ ಅನು ಪಿ.ಎ, ಸಾಹಿತ್ಯ ಸಂಘದ ಕಾರ್ಯದರ್ಶಿಯಾಗಿ ಆಯುಷತುಲ್ ಹಸೀನಾ, ಮತದಾರರ ಸಾಕ್ಷರತಾ ಸಂಘದ ವಿದ್ಯಾರ್ಥಿ ಪ್ರತಿನಿಧಿಯಾಗಿ ಮಹಮ್ಮದ್ ಹ್ಯಾರಿಸ್ ಫೈರೋಜ್, ಕ್ರೀಡಾ ಉಪ ಕಾರ್ಯದರ್ಶಿಯಾಗಿ ಜುನೈದ್, ಸಾಂಸ್ಕೃತಿಕ ಉಪ ಕಾರ್ಯದರ್ಶಿಯಾಗಿ ಅಭಿನ್ ಬೈಜು, ಸಾಹಿತ್ಯ ಸಂಘದ ಉಪ ಕಾರ್ಯದರ್ಶಿಯಾಗಿ ಏ.ದುರ್ಗಾ ಪ್ರಸಾದ್.ಬಿ.ರೈ ಆಯ್ಕೆಯಾದರು.
ಕಾಲೇಜು ಪ್ರಾಂಶುಪಾಲರಾದ ಕಿರಣ್ ಕುಮಾರ್ ಚುನಾವಣಾ ಪ್ರಕ್ರಿಯೆಗೆ ನಿರ್ದೇಶನ ನೀಡಿದ್ದರು. ವಿದ್ಯಾರ್ಥಿ ಸಂಘದ ಸಂಯೋಜಕರಾದ ರಾಜೇಶ.ಎನ್ ಹಾಗೂ ಉಪನ್ಯಾಸಕರು ಚುನಾವಣೆಯನ್ನು ನಡೆಸಿಕೊಟ್ಟರು.