ನೆಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರ್ನಡ್ಕ -ಕೊಪ್ಪ ರಸ್ತೆಯು ಹಲವು ವರ್ಷಗಳಿಂದ ದುರಸ್ತಿ ಕಾಣದೆ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಸಂಚರಿಸಲು ಸಾಧ್ಯವಾಗದೆ ಕೆಸರಿಂದ ಕೂಡಿರುವುದನ್ನು ಆಡಳಿತ ವರ್ಗದವರು ಗಮನಕೊಡದೆ ಇದ್ದಾಗ ಸಾರ್ವಜನಿಕರು ಸೇರಿ ರಸ್ತೆಯನ್ನು ದುರಸ್ತಿಗೊಳಿಸಿದ ಕಾರ್ಯ ನಡೆದಿದೆ.
ಮಳೆಗಾಲದಲ್ಲಿ ಕೆಸರು ಹೊದ್ದು ಸಾರ್ವಜನಿಕರು ನಡೆದಾಡಲು ಪರೆದಾಡುವ ಸ್ಥಿತಿ ನಿರ್ಮಾಣವಾಗಿತ್ತು. ವರ್ಷಗಳಿಂದ ರಸ್ತೆಯ ಅಭಿವೃದ್ಧಿ ಗಗನ ಕುಸುಮವಾಗಿದ್ದು, ವಿದ್ಯಾರ್ಥಿಗಳಿಗೆ ನಡೆಯಲು, ಬೈಕ್ ಸವಾರರಿಗೂ ಸಂಚರಿಸಲು ಆಗದ ಸ್ಥಿತಿ ತಲುಪಿತ್ತು. ಇದೀಗ ಆಡಳಿತ ವರ್ಗಕ್ಕೆ ಸೆಡ್ಡು ಹೊಡೆದು ಸಾರ್ವಜನಿಕರೇ ಸುಮಾರು ಇಪ್ಪತೈದು ಸಾವಿರದಷ್ಟು ಹಣ ಸಂಗ್ರಹಿಸಿ ರಸ್ತೆ ದುರಸ್ತಿ ಮಾಡಿರುವ ಘಟನೆ ನಡೆದಿದೆ.
ಇನ್ನಾದರೂ ಸ್ಥಳೀಯಾಡಳಿತ ಇತ್ತ ಗಮನಹರಿಸಿ ಸರ್ವ ಋತು ಸಂಚಾರಕ್ಕೆ ಯೋಗ್ಯವಾಗುವ ರೀತಿಯಲ್ಲಿ ರಸ್ತೆಯನ್ನು ನಿರ್ಮಿಸ ಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.