ಪುತ್ತೂರು: ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಜೂ.13ರಂದು ಪುತ್ತೂರು ಕೋರ್ಟ್ ರಸ್ತೆಯ ದೈಯ್ಯರ ಅಂಗಡಿಯ ಬಳಿ ನಡೆದಿದೆ.
ಗುಣಕರ ಶೆಟ್ಟಿ ಮತ್ತು ಸದಾಶಿವ ಪೈ ನಡುವೆ ಗಲಾಟೆ ನಡೆದಿದ್ದು, ನಗರದ ದರ್ಬೆ ನಿವಾಸಿ ಸದಾಶಿವ ಪೈ ಚೂರಿ ಇರಿತಕ್ಕೊಳಗಾಗಿದ್ದಾರೆ.
ಚೂರಿ ಇರಿತದಿಂದ ಗಾಯಗೊಂಡ ಸದಾಶಿವ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಹನ ಪಾರ್ಕಿಂಗ್ ವಿಚಾರದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.