
ಕೊಕ್ಕಡ: ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ಸಂಘದ ವತಿಯಿಂದ ಶ್ರಮದಾನ ಜೂ 22 ರಂದು ನಡೆಯಿತು.
ಕಾಯರ್ತಡ್ಕ ದಿಂದ ಶಿಬರಾಜೆಯ ಪಾದೆವರೆಗೆ ರಸ್ತೆಯ ಅಕ್ಕ ಪಕ್ಕದ ಗಿಡಗಂಟೆ ಗಳನ್ನು ತೆಗೆದು ಗುಂಡಿ ಮುಚ್ಚುವ ಕಾರ್ಯವನ್ನು ಮಾಡಲಾಗುವುದು ಎಂದು ಸಂಘದ ಸದಸ್ಯರು ತಿಳಿಸಿದರು.
ಸಂಘದ ಗೌರವಧ್ಯಕ್ಷ ಪಿ.ಟಿ ಸಬಾಸ್ಟಿನ್, ಉಪಾಧ್ಯಕ್ಷ ಶಾಜಿ ತೋಮಸ್, ಕಾರ್ಯದರ್ಶಿ ತೋಮಸ್ ಪಿ.ಡಿ, ಕೋಶಾಧಿಕಾರಿ ಮ್ಯಾತ್ಯು ಕೆ.ಕೆ ಉಪಸ್ಥಿತರಿದ್ದರು. ಸುಮಾರು 40ಕ್ಕೂ ಹೆಚ್ಚು ಜನ ಶ್ರಮದಾನದಲ್ಲಿ ಪಾಲ್ಗೊಂಡರು.









