ಪಂಜ: ವಿಹಿಂಪ ವತಿಯಿಂದ ಧರ್ಮ ರಕ್ಷಾ ಯಜ್ಞ ಕಾರ್ಯಕ್ರಮ

ಶೇರ್ ಮಾಡಿ

ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ವಿಭಾಗದ ವತಿಯಿಂದ ಪಂಜದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮ ರಕ್ಷಾ ಯಜ್ಞ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿದ್ದವರನ್ನು ಮಾತೃ ಧರ್ಮಕ್ಕೆ ಕರೆ ತರಲಾಗಿದೆ. ಕ್ರೈಸ್ತ ಮತಕ್ಕೆ ಮತಾಂತರಗೊಂಡ ಪಂಜದ ಕೊರಗ ಸಮುದಾಯದ ಏಳು ಕುಟುಂಬದ 15 ಪುರುಷರು ಹಾಗೂ 10 ಮಹಿಳೆಯರು ಸೇರಿದಂತೆ ಒಟ್ಟು 25 ಜನರನ್ನು ಮರಳಿ ಮಾತೃ ಧರ್ಮಕ್ಕೆ ಕರೆ ತರಲಾಯಿತು. ಮರಳಿ ಬಂದ ಕುಟುಂಬಗಳಿಗೆ ಬಟ್ಟೆಗಳು, ದಿನಸಿ ಸಾಮಗ್ರಿಗಳು, ವಿವಿಧ ದೇವರುಗಳ ಫೋಟೋಗಳು, ಮತ್ತು ಗೃಹ ಉಪಯೋಗಿ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೊಟೊ, ಮಾಹಿತಿ ಹರಿದಾಡುತ್ತಿದೆ.

ಸಂಘಟನೆಯ ಪ್ರಮುಖರಾದ ಸೂರ್ಯ ನಾರಾಯಣ್, ಸುನಿಲ್ ಕೆ.ಆರ್., ಪುನೀತ್, ನವೀನ್ ನೆರಿಯ, ಮೂಲ ಚಂದ್ರ, ಪ್ರಮೋದ್ ರೈ, ಜಯಂತ್ ಕಲ್ಲುಗುಡ್ಡೆ, ಮಾತೃ ಶಕ್ತಿಯ ಗೀತಾ, ಪ್ರಮೀಳಾ ಲೋಕೇಶ್, ನಿತ್ಯಾನಂದ ಮೇಲ್ಮನೆ, ಸತ್ಯನಾರಾಯಣ ಹೆಗ್ಡೆ ಕಡಬ, ಕಿರಣ್ ಪಂಜ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

error: Content is protected !!