ನೆಲ್ಯಾಡಿ: ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಪೋಷಕರ ಪುನಶ್ಚೇತನ ಕಾರ್ಯಗಾರ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಪೋಷಕರ ಪುನಶ್ಚೇತನ ಕಾರ್ಯಗಾರ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಪೋಷಕರ ಪುನಶ್ಚೇತನ ಕಾರ್ಯಗಾರ ಹಾಗೂ ಸಾಮಾನ್ಯ ಸಭೆ ವಿವಿಧ ಹಂತಗಳಲ್ಲಿ ಜೂ.18ರಿಂದ ಜೂ. 20ರವರೆಗೆ ನಡೆಯಿತು.

ಎಸ್ ಎಚ್ ಕಾನ್ವೆಂಟ್ ನ ಕೌನ್ಸಿಲರ್ ಗಳಾದ ಸಿಸ್ಟರ್ ಆಲ್ವಿ, ಸಿಸ್ಟರ್ ಬ್ಲೆಸಿ ಮರಿಯ ಅವರು ಹದಿಹರೆಯ ಮಕ್ಕಳನ್ನು ಹೇಗೆ ಬೆಳೆಸಬೇಕು, ಅವರು ಎದುರಿಸುತ್ತಿರುವ ಸವಾಲುಗಳು ಯಾವುದು, ಪೋಷಕರಾದ ನಾವುಗಳು ಮಕ್ಕಳನ್ನು ಹೇಗೆ ನಿಭಾಯಿಸಬೇಕು ಹಾಗೂ 6 ರಿಂದ 13 ವರ್ಷದ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೇನು? ಉತ್ತಮ ಪೋಷಕ ಹೇಗಿರಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಪಿಯುಸಿ, ಪ್ರೌಢ, ಪ್ರಾಥಮಿಕ ವಿಭಾಗಗಳಾಗಿ ವಿಂಗಡಿಸಿ 4 ಹಂತಗಳಲ್ಲಿ ನಾಲ್ಕು ದಿನಗಳ ಕಾಲ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಗಾರವನ್ನು ನಡೆಸಲಾಯಿತು.

ವಿಭಾಗದ ಮುಖ್ಯಸ್ಥರಾದ ಸುಶೀಲ್ ಕುಮಾರ್, ಜಾರ್ಜ್.ಕೆ ತೋಮಸ್, ಜೋಶ್ ಪ್ರಕಾಶ್, ಲಿಸ್ಸಿ ಕೆ.ಜೆ ಉಪಸ್ಥಿತರಿದ್ದರು.

ಪೋಷಕರ ಸಭೆಯಲ್ಲಿ ತರಗತಿವಾರು ಪೋಷಕರ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು. ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಶಿಕ್ಷಕಿ ಎಲಿಸಬೆತ್ ಎನ್.ಪಿ. ಕಾರ್ಯಕ್ರಮ ನಿರ್ವಹಿಸಿದರು.

Leave a Reply

error: Content is protected !!