ಕಡಬ: ಕೇಸರ್ ಡ್ ಉಂಜಿ ದಿನ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ

ಶೇರ್ ಮಾಡಿ

ಕಡಬ: ಶ್ರೀದೇವಿ ಯಕ್ಷಗಾನ ಕಲಾಕೇಂದ್ರ ಕಡಬ ಇವರ ವತಿಯಿಂದ ದ್ವಿತೀಯ ವರುಷದ ಕೇಸರ್ ಡ್ ಉಂಜಿ ದಿನ ಮತ್ತು ಕಲಾಕೇಂದ್ರದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಜೂ.23ರಂದು ಕೂಡಿಬೈಲು ಎಂಬಲ್ಲಿ ಜರಗಿತು.

ಕಾರ್ಯಕ್ರಮವನ್ನು ಕಡಬ ದುರ್ಗಾಂಬ ಮೊಬೈಲ್ಸ್ ನ ಮಾಲಕ ದಯಾನಂದ ಗೌಡ ಆರಿಗ ಅವರು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿ ನೆಲ್ಯಾಡಿ ಶಬರೀಶ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಮಾತನಾಡಿ ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವುದು ಸಂತೋಷದ ವಿಷಯವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಯಾಂತ್ರಿಕ ಬದುಕಿನಿಂದ ಹೊರಬರಲು ಹಾಗೂ ಆರೋಗ್ಯಕರವಾದ ವಾತಾವರಣ ದೊರೆಯಲು ಈ ರೀತಿಯ ಕಾರ್ಯಕ್ರಮಗಳು ಸಹಕಾರಿಯಾಗಿದೆ, ಶ್ರೀದೇವಿ ಯಕ್ಷಗಾನ ಕಲಾಕೇಂದ್ರದವರು ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವಲ್ಲಿ ಉತ್ತಮವಾದ ಕೆಲಸವನ್ನು ಮಾಡುತ್ತಿರುವುದು ಹೆಮ್ಮೆ ಎನಿಸುತ್ತದೆ ಎಂದರು.

ಅಧ್ಯಕ್ಷತೆಯನ್ನು ಪಿ.ಕೆ.ಕಿಶನ್ ಕುಮಾರ್ ರೈ ವಹಿಸಿದ್ದರು. ಯಕ್ಷಗುರುಗಳಾದ ಪ್ರಶಾಂತ್ ನೆಲ್ಯಾಡಿ, ಯೋಗೀಶ್ ಕಡಬ, ದೇವಕಿ ಸುವರ್ಣ ಕೋಡಿಬೈಲು, ಶ್ರೀದೇವಿ ಕಲಾಕೇಂದ್ರದ ಗೌರವ ಸದಸ್ಯ ಹರೀಶ್ ಗೌಡ ಕೋಡಿಂಬಾಳ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿನ್ಯಾಸ್ ನೆಲ್ಯಾಡಿ, ವೆಂಕಟೇಶ ಆರಿಗ, ಜಯಪ್ರಕಾಶ್ ದೋಳ ಇವರುಗಳನ್ನು ಸನ್ಮಾನಿಸಲಾಯಿತು.

ಊರವರು, ಕಲಾ ಕೇಂದ್ರದ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದರು. ಪ್ರತೀಕಾ ಕೋಡಿಬೈಲು ಸ್ವಾಗತಿಸಿದರು, ಲೋಕೇಶ್ವರಿ ವಂದಿಸಿದರು.

Leave a Reply

error: Content is protected !!