
ಕೊಕ್ಕಡ : ಭಾರಿ ಮಳೆಗೆ ಮನೆ ಹಿಂಬದಿಯ ಗುಡ್ಡೆ ಜರಿದು ಮಣ್ಣು ಮನೆಯ ಗೋಡೆ ಹಾಗೂ ಸಮೀಪದಲ್ಲಿ ನಿಲ್ಲಿಸಿದ್ದ ಬೈಕ್ ಮೇಲೆ ಬಿದ್ದು ಹಾನಿಯಾದ ಘಟನೆ ಶಿಬರಾಜೆ ಸಮೀಪದ ಪಾದೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಪಾದೆ ನಿವಾಸಿ ರತ್ನಾಕರ ಗೌಡ ಅವರ ಮನೆ ಸಮೀಪದ ಮನೆ ಹಿಂಬದಿಯ ಗುಡ್ಡೆ ಜರಿದು ಈ ಅನಾಹುತ ಸಂಭವಿಸಿದೆ.
ರತ್ನಾಕರ ಗೌಡ ಹಾಗೂ ಅವರ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಳೆಂಜ ಗ್ರಾಮ ಪಂಚಾಯಿತಿನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.









