ಪುಟ್‌ಪಾತ್‌ನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್! ನೆಲ್ಯಾಡಿ ಹೆದ್ದಾರಿ ಕಾಮಗಾರಿಯಲ್ಲೊಂದು ಯಡವಟ್ಟು

ಶೇರ್ ಮಾಡಿ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಅಡ್ಡಹೊಳೆ – ಬಿ.ಸಿ. ರೋಡ್ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ನಡುವೆಯೇ ನೆಲ್ಯಾಡಿಯ ಫೂಟ್‌ಪಾತ್‌ನಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಸುವ ಮೂಲಕ ಅಪಾಯಕ್ಕೆ ಆಹ್ವಾನ ನೀಡಲಾಗಿದೆ.

ಸರ್ವಿಸ್ ರಸ್ತೆಯ  ಪಕ್ಕದಲ್ಲಿ  ಚರಂಡಿ  ನಿರ್ಮಿಸಲಾಗಿದ್ದು, ಚರಂಡಿ ಮಧ್ಯದಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗಿದೆ. ಸ್ಥಳೀಯಾಡಳಿ ಇಲ್ಲವೇ ಸಾರ್ವಜನಿಕರಲ್ಲಿ ಚರ್ಚಿಸದೆ ಏಕಾಏಕಿ ಈ ಅಪಾಯಕಾರಿ ಕಾಮಗಾರಿ ನಡೆಸಲಾಗಿದೆ.

ಸಾವಿರಾರು ವಾಹನಗಳು ಸಂಚರಿಸುವ ಸಾರ್ವಜನಿಕರು, ಶಾಲಾ ಮಕ್ಕಳು ನಡೆದಾಡುವ ಸ್ಥಳ ಇದಾಗಿದೆ. ಮಳೆಗಾಲದಲ್ಲಿ ವಿದ್ಯುತ್ ಅವಘಡಗಳು ಹೆಚ್ಚಾಗಿರುವುದುರಿಂದ ಕೂಡಲೇ ಪರಿವರ್ತಕವನ್ನು ಸ್ಥಳಾಂತರಿಸುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸರ್ವಿಸ್ ಯ ರಸ್ತೆ ಅಗಲ ಕಿರಿದಾಗಿರುವುದರಿಂದ, ಪಾದಾಚಾರಿಗಳು ಚರಂಡಿಯ ಮೇಲೆ ಸಂಚರಿಸುವುದು ಅನಿವಾರ್ಯವಾಗಿದೆ. ಚರಂಡಿಯಲ್ಲಿ ವಿದ್ಯುತ್ ಪರಿವರ್ತಕವನ್ನು ಅಳವಡಿಸಿರುವುದರಿಂದ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ
-ಅನಿಲ್ ರೈ ಹಾರ್ಪಳ

ಬದಲಿಸಲು ಸಿದ್ಧ:
ಹೆದ್ದಾರಿ ಕಾಮಗಾರಿ ನಡೆಯುವ ಸಂದರ್ಭ ಎಚ್.ಟಿ. ಲೈನ್ ಸ್ಥಳಾಂತರ ಮಾಡುವ ಅನಿವಾರ್ಯತೆ ಇತ್ತು. ಹೆದ್ದಾರಿ ಪ್ರಾಧಿಕಾರದವರು ಸೂಚಿಸಿದ ಜಾಗದಲ್ಲಿ ಪರಿವರ್ತಕ ಅಳವಡಿಸಲಾಗಿದೆ. ಪರಿವರ್ತಕ ಅಳವಡಿಸಿದ ಜಾಗ ಪಾದಾಚಾರಿಗಳು ಸಂಚರಿಸುವ ಜಾಗವೆಂಬ ಮಾಹಿತಿಯನ್ನು ನೀಡದೇ ಇರುವುದು ಇದಕ್ಕೆ ಕಾರಣ. ಒಂದು ವೇಳೆ ಪರಿವರ್ತಕವಿರುವ ಜಾಗ ಪಾದಾಚಾರಿಗಳು ಸಂಚರಿಸುವ ಮಾರ್ಗವಾಗಿದ್ದಲ್ಲಿ, ಹೆದ್ದಾರಿ ಪ್ರಾಧಿಕಾರದವರು ಬದಲಿ ಜಾಗ ಸೂಚಿಸಿದರೆ ಸ್ಥಳಾಂತರ ಮಾಡಬಹುದು. ಪರಿಸ್ಥಿತಿಯ ಗಂಭೀರತೆ ಅರಿತು ಟಿ.ಸಿ.ಹಾಕಿದ ಜಾಗದಲ್ಲಿ ಬೇಲಿ ನಿರ್ಮಿಸುವಂತೆ ಹೆದ್ದಾರಿ ಇಲಾಖೆಯವರಿಗೆ ತಿಳಿಸಲಾಗುವುದು ಎಂದು ಮೆಸ್ಕಾಂ ಕಿರಿಯ ಸಹಾಯಕ ಅಭಿಯಂತರರಾದ ರಮೇಶ್ ತಿಳಿಸಿದ್ದಾರೆ.

Leave a Reply

error: Content is protected !!