ನೆಲ್ಯಾಡಿ: ನೆಲ್ಯಾಡಿಯ ಬಾಲಯೇಸು ದೇವಾಲಯದಲ್ಲಿ, ಐ.ಸಿ.ವೈ.ಎಂ., ಸ್ತ್ರೀ ಸಂಘಟನೆ, ಕಥೊಲಿಕ್ ಸಭಾ ಸಂಘಟನೆ ಹಾಗೂ ಪರಿಸರ ಆಯೋಗ ಇವರ ನೇತೃತ್ವದಲ್ಲಿ ಜು.7ರಂದು ಗಿಡವನ್ನು ನೆಟ್ಟು ವನಮಹೋತ್ಸವ ದಿನಾಚರಣೆ ಆಚರಿಸಲಾಯಿತು.
ಚರ್ಚಿನ ಧರ್ಮಗುರು ವಂ.ಫಾ.ಗ್ರೇಶನ್ ಅಲ್ವಾರಿಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ “ಆರತಿಗಾಗಲಿ ಕೀರ್ತಿಗಾಗಲಿ ಈ ದಿನ ಮನೆಯಲ್ಲಿ ಒಂದು ಗಿಡವನ್ನಾದರು ನಡಬೇಕೆಂದು ವಿನಂತಿಸಿ, ಪರಿಸರ ಸಂರಕ್ಷಿಸುವಲ್ಲಿ ನಮ್ಮ ಯೋಚನೆ ಇರಬೇಕೆಂದು ಸಂದೇಶವನ್ನು ನೀಡಿದರು. ಚರ್ಚಿನ ಪಾಲನಾ ಸಮೀತಿಯ ಉಪಾಧ್ಯಕ್ಷ ತೋಮಸ್ ಡಿಸೋಜ, ಕಾರ್ಯಾದರ್ಶಿ ನಿಶ್ಮಿತಾ ಡಿಸೋಜ, ಪ್ರಶಾಂತ್ ನಿವಾಸ್ ಕಾನ್ವೆಂಟಿನ ಸುಪೀರಿಯರ್ ಸಿ.ತೆರೆಜಾ ಜೋನ್, ಸಂಚಾಲಕ ವಿಕ್ಟರ್ ಸ್ಟ್ರೆಲ್ಲಾ, ಐ.ಸಿ.ವೈ.ಎಂ ಸಚೇತಕಿ ಸಿ.ಸರಿತಾ ಡಿಸೋಜ, ಪರಿಸರ ಅಯೋಗದ ಸಂಚಾಲಕ ಫ್ರಾನ್ಸಿಸ್ ಡಿಸೋಜ, ಐ.ಸಿ.ವೈ.ಎಂ ಅಧ್ಯಕ್ಷೆ ಹರ್ಷಿತಾ ಡಿಸೋಜ, ಕಥೊಲಿಕ್ ಸಭಾ ಅಧ್ಯಕ್ಷ ಪ್ರೀತಂ ಡಿಸೋಜ ಹಾಗೂ ಸ್ತ್ರೀ ಸಂಘಟನೆ ಅಧ್ಯಕ್ಷೆ ಪ್ರಿಯಾ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಚರ್ಚಿನ ತೋಟದಲ್ಲಿ 41 ಅಡಿಕೆ ಗಿಡಗಳನ್ನು ನೆಡಲಾಯಿತು. ಸಂದೀಪ್ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.