ಬೈಕ್‌ -ಕಾರು ಮುಖಾಮುಖಿ ಢಿಕ್ಕಿ; ಬೈಕ್‌ ಸವಾರ ಮೃತ್ಯು

ಶೇರ್ ಮಾಡಿ

ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಬೈಕ್‌ವೊಂದು ಕಾರಿಗೆ ಢಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟ ಘಟನೆ ಶನಿವಾರ ಕೊಪ್ಪಲಂಗಡಿಯಲ್ಲಿ ನಡೆದಿದೆ.

ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುವಾಗ ಅದೇ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್‌ -ಕಾರು ಪರಸ್ಪರ ಮುಖಾಮುಖಿ ಢಿಕ್ಕಿಯಾದ ಪರಿಣಾಮ ರಭಸಕ್ಕೆ ಕಾರು ನಜ್ಜುಗುಜ್ಜು ಆಗಿದೆ.

ಮೃತಪಟ್ಟ ಬೈಕ್‌ ಸವಾರ ತಮಿಳುನಾಡು ಮೂಲದ ಯುವಕನಾಗಿದ್ದು, ಈ ಘಟನೆಯಲ್ಲಿ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿವೆ. ಅಪಘಾತದ ಹೊಡೆತಕ್ಕೆ ಸ್ಥಳದಲ್ಲಿದ್ದ ವಿದ್ಯುತ್‌ ಕಂಬಗಳು ಮುರಿದು ಬಿದ್ದಿದೆ. ಸ್ಥಳಕ್ಕೆ ಕಾಪು ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

Leave a Reply

error: Content is protected !!