ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

ಶೇರ್ ಮಾಡಿ

ಕನ್ಯಾಡಿ: ಕಿರಣ್ ಅಗ್ರೋಟೆಕ್ ನ ಮಾಲಿಕರಾದ ಪ್ರಕಾಶ್.ಬಿ.ಕೆ ಅವರು ಜು.20 ರಂದು ಸೇವಾಭಾರತಿ ಕನ್ಯಾಡಿಯ ಕಚೇರಿಗೆ ಭೇಟಿ ನೀಡಿ, ಸೊಳ್ಳೆಯನ್ನು ಮುಕ್ತಮಾಡುವ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರವನ್ನು ಸೇವಾಧಾಮಕ್ಕೆ ಕೊಡುಗೆಯಾಗಿ ನೀಡಿದರು.

ಇವರು ಸೇವಾಭಾರತಿ/ ಸೇವಾಧಾಮದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ, ಈ ಹಿಂದಿನಂತೆ ಮುಂದೆಯೂ ಸೇವಾಕಾರ್ಯಗಳಿಗೆ ಕೈ ಜೋಡಿಸುತ್ತೇನೆ ಎಂದು ಹೇಳಿ ಯಂತ್ರವನ್ನು ಸೇವಾಭಾರತಿಯ ಸಲಹಾ ಸಮಿತಿ ಸದಸ್ಯರಾದ ರಜತ್ ರಾವ್ ಇವರಿಗೆ ಹಸ್ತಾಂತರಿಸಿದರು.

ರಜತ್ ರಾವ್ ಇದನ್ನು ಸ್ವೀಕರಿಸಿ ಫಲಾನುಭವಿಗಳು ಮತ್ತು ಸಂಸ್ಥೆಯ ಪರವಾಗಿ ಧನ್ಯವಾದವಿತ್ತರು ಹಾಗೂ ಈ ಸಂದರ್ಭದಲ್ಲಿ ಸೇವಾಭಾರತಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಉಜಿರೆಯಲ್ಲಿ ಮುಖ್ಯ ಸೇವಾ ಕೇಂದ್ರವಿದ್ದು ಈ ವರ್ಷದಿಂದ ಕೊಕ್ಕಡದಲ್ಲೂ ಸೇವಾವಿಭಾಗ ಹೊಂದುವ ಮೂಲಕ ಕಿರಣ್ ಆಗ್ರೋ ಟೆಕ್ ಕೃಷಿಕರ ಅಶೋತ್ತರಗಳಿಗೆ ಶ್ರಮಿಸುವಲ್ಲಿ ಸಾಫಲ್ಯ ಕಂಡಿದೆ.

Leave a Reply

error: Content is protected !!