ಬೆಳ್ತಂಗಡಿ: ಶ್ರೀ ಗುರುನಾರಾಯಣ ಸಂಘದಲ್ಲಿ ಆಟಿದ ಅಟ್ಲಿದ ಕೂಟ

ಶೇರ್ ಮಾಡಿ

ಬೆಳ್ತಂಗಡಿ: ತುಳುನಾಡ ಸಂಸ್ಕೃತಿ, ಕೃಷಿಕರು ಹಿಂದಿನ ಕಾಲದಿಂದ ನಡೆಸಿಕೊಂಡು ಬರುತ್ತಿದ್ದ ಆಚಾರ ವಿಚಾರಗಳ ಉಳಿವಿಗಾಗಿ ಇಂತಹ ಆಟಿ ಕಾರ್ಯಕ್ರಮಗಳು ಅಗತ್ಯ ಎಂದು ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಂ.ಕೆ. ಪ್ರಸಾದ್ ಹೇಳಿದರು.

ಅವರು ಜು.8ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆಯ ಸಹಕಾರದಲ್ಲಿ ಮಹಿಳಾ ಬಿಲ್ಲವ ವೇದಿಕೆಯ ನೇತೃತ್ವದಲ್ಲಿ ನಡೆದ ಆಟಿದ ಅಟಿಲ್ಡ ಕೂಟ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಆಟಿ ತಿಂಗಳಲ್ಲಿ ಹಿರಿಯರು ತಮ್ಮ ಕಷ್ಟದ ಸಮಯದಲ್ಲಿ ಪ್ರಕೃತಿಯಲ್ಲಿ ಸಿಗುವ ವಿವಿಧ ಆಹಾರ ಪದಾರ್ಥ ಸೇವನೆಯಿಂದ ಆರೋಗ್ಯವಂತ ಜೀವನ ಸಾಗಿಸುತ್ತಿದ್ದರು ಅಂದಿನ ಆಚರಣೆಗಳು ಉಳಿಯಲು ಇಂತಹ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ. ತುಳುನಾಡ ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ 8ನೇ ಪರಿಷೇಧಕ್ಕೆ ಸೇರಿಸಲು ಎಲ್ಲರು ಒಟ್ಟಾಗಿ ಪ್ರಯತ್ನಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ನಮ್ಮ ಸಂಘದ ಸಹಕಾರದಲ್ಲಿ ಮಹಿಳಾ ಬಿಲ್ಲವ ವೇದಿಕೆಯ ಉಸ್ತುವಾರಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಮಾಡಿಕೊಟ್ಟು ಈ ಕಾರ್ಯಕ್ರಮದ ಮೂಲಕ ಎಲ್ಲರನ್ನು ಒಟ್ಟು ಕೂಡಿಸುವ ಕಾರ್ಯ ಆಗಿದೆ, ತಾಲೂಕಿನಲ್ಲಿ ಬಾಕಿ ಇರುವ ಗ್ರಾಮ ಸಮಿತಿಗಳನ್ನು ಮಾಡಲು ಗ್ರಾಮದ ಸ್ವಜಾತಿ ಭಾಂಧವರು ಸಹಕಾರ ನೀಡಬೇಕು ಎಂದರು. ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಅಧ್ಯಕ್ಷ ಮತ್ತು ವೇದಿಕೆಯಲ್ಲಿ ಇದ್ದ ಅತಿಥಿಗಳು ಚೆನ್ನ ಮನೆ ಆಟ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಕಾರ್ಯದರ್ಶಿ ನಿತೇಶ್.ಹೆಚ್. ಶುಭ ಹಾರೈಸಿದರು.

ಸಂಘದ ಮಾಜಿ ಅಧ್ಯಕ್ಷರುಗಳಾದ ವಸಂತ ಸಾಲಿಯಾನ್, ಸೋಮನಾಥ ಬಂಗೇರ, ಭಗೀರಥ.ಜಿ. ಮಹಿಳಾ ಬಿಲ್ಲವ ವೇದಿಕೆಯ ಮಾಜಿ ಅಧ್ಯಕ್ಷರುಗಳಾದ ತನುಜಾ ಶೇಖರ್, ವಿನೋದಿನಿ ರಾಮಪ್ಪ, ಪ್ರೇಮಾ ಉಮೇಶ್, ರಾಜಶ್ರೀ ರಮಣ್, ಸಂಘದ ನಿರ್ದೇಶಕರುಗಳು, ಮಾಜಿ ನಿರ್ದೇಶಕರು ಬಿಲ್ಲವ ಮಹಿಳಾ ವೇದಿಕೆಯ ಪದಾಧಿಕಾರಿಗಳು, ವಿವಿಧ ಗ್ರಾಮ ಸಮಿತಿಗಳ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು. ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಶಾಂಭವಿ ಬಂಗೇರ ವಂದಿಸಿದರು. ಶ್ರೀಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರು ಗುರುರಾಜ್ ಗುರಿಪಳ್ಳ, ರೂಪೇಶ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಗ್ರಾಮದ ಮಹಿಳೆಯ ಆಟಿಯ ತಿಂಗಳ ವಿವಿಧ ಖಾದ್ಯಗಳನ್ನು ತಂದು ಸಹ ಭೋಜನ ನಡೆಯಿತು.

Leave a Reply

error: Content is protected !!