ಕೊಕ್ಕಡ: ಶಿಶಿಲ ಗ್ರಾಮ ಪಂಚಾಯತ್ ಮಟ್ಟದ ಸೃಷ್ಠಿ ಸಂಜೀವಿನಿ ಮಹಿಳಾ ಒಕ್ಕೂಟದ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯೆಯರು ಶಿಶಿಲ ಗ್ರಾಮದ ಎಳ್ಳುಮಜಲು ಎಂಬಲ್ಲಿ ಭತ್ತದ ಗದ್ದೆಯನ್ನು ಪಡೆದುಕೊಂಡು ಉಳುಮೆ ಮಾಡಿ ನೇಜಿ ನೆಡುವ ಕಾರ್ಯಕ್ರಮ ಜು.24ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಶಿಶಿಲ ಗ್ರಾಮ ಪಂಚಾಯತಿ ಅಧ್ಯಕ್ಷ ಸುದಿನ್ ಕುಮಾರ್, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ದಿನೇಶ್, ಸಂಜೀವಿನಿ ಕಾರ್ಯಕ್ರಮದ ವಲಯ ಮೇಲ್ವಿಚಾರಕ ವೀಣಾಶ್ರೀ, ಬೆಳ್ತಂಗಡಿ ತಾಲೂಕು ನೇತ್ರಾವತಿ ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ, ಶಿಶಿಲ ಸೃಷ್ಠಿ ಸಂಜೀವಿನಿ ಒಕ್ಕೂಟ ಅಧ್ಯಕ್ಷ ಗಿರಿಜಾ ಕೆದಿಲಾಯ, ಶಾರದಾ, ಶಶಿಕಲಾ ಮತ್ತುಸಂಧ್ಯಾ, ಕೃಷಿ ಸಖಿ ವಸಂತಿ, ಗಿರಿಜನ ಕಾಲೊನಿ ಅಂಗನವಾಡಿ ಕಾರ್ಯಕರ್ತೆ ಯಶೋದಾ, ನಿವೃತ್ತ ಮುಖ್ಯ ಶಿಕ್ಷಕಿ ಸುಗುಣ ಕುಮಾರಿ, ಆಶಾ ಕಾರ್ಯಕರ್ತೆ ರೂಪಾ, ಮತ್ಸ್ಯ ಶಿವದುರ್ಗಾ ಮಹಿಳಾ ಭಜನಾ ಸಂಘದ ಅಧ್ಯಕ್ಷ ವಿಶಾಲಾಕ್ಷಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮದಲ್ಲಿ ಆಟಿ ತಿಂಗಳ ವಿಶೇಷ ತಿನಿಸುಗಳಾದ ಮರಕೆಸುವಿನ ಪತ್ರೊಡೆ ಹಾಗೂ ಕಳಲೆ ಪಲ್ಯವನ್ನು ಉಣ ಬಡಿಸಲಾಯಿತು.