ನೆಲ್ಯಾಡಿ: ಜುಲೈ 24ರ ಸಂಜೆ ಸುರಿದ ಬಾರಿ ಸುಂಟರಗಾಳಿ ಮಳೆಯಿಂದಾಗಿ ಹಲವಾರು ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಂತ ಘಟನೆ ನಡೆದಿಲ್ಲ.
ಗುಂಡ್ಯ, ಎಂಜಿರ,ಸೋಣಂದೂರು, ಪೆರಿಯಶಾಂತಿ, ಬಲ್ಯ ಸೇರಿದಂತೆ ಸುತ್ತುಮುತ್ತ ಸುಮಾರು 29 ವಿದ್ಯುತ್ ಕಂಬಗಳು 2ಡಿಪಿ, 3ಟಿಸಿ ಗಳು ತುಂಡಾಗಿ ಬಿದ್ದಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ರಾತ್ರಿಯಿಂದಲೇ ಕರೆಂಟ್ ನಲ್ಲಿ ತೊಂದರೆ ಉಂಟಾಗಿತ್ತು.
ಬಾರಿ ಪ್ರಮಾಣದಲ್ಲಿ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಕಡಿದು ಬಿದ್ದುದ್ದರಿಂದ ಇವುಗಳ ರಿಪೇರಿಗೆ ಹೆಚ್ಚಿನ ಸಮಯ ತಗಲಲಿದ್ದು. ಸಮರೋಪಾದಿಯಲ್ಲಿ ಮೆಸ್ಕಾಂನವರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಸುಮಾರು 10 ಲಕ್ಷಕ್ಕಿಂತಲೂ ಅಧಿಕ ನಷ್ಟ ಉಂಟಾಗಿದೆ ಎಂದು ನೆಲ್ಯಾಡಿಯ ಮೆಸ್ಕಾಂ ಕಿರಿಯ ಸಹಾಯಕ ಅಭಿಯಂತರ ರಮೇಶ್ ತಿಳಿಸಿದರು.