ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದಿಂದ ರೂ 3ಲಕ್ಷ ಅನುದಾನ

ಕೊಕ್ಕಡ: ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಶ್ರೀ ಶಾಸ್ತರ ದೇವರ ಗುಡಿಯ ನೂತನ ಗರ್ಭಗುಡಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ರೂ 3ಲಕ್ಷ ಅನುದಾನವನ್ನು ಜು.25ರಂದು ಚೆಕ್ ಮೂಲಕ ನೀಡಿರುತ್ತಾರೆ.

ಚೆಕ್ ನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್.ಕೆ.ಡಿ.ಆರ್.ಡಿ.ಪಿ ಯ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ, ದೇವಸ್ಥಾನದ ಅಧ್ಯಕ್ಷ ಶ್ರೀಧರ್ ರಾವ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ವಲಯದ ಮೇಲ್ವಿಚಾರಕ ರವೀಂದ್ರ, ಸೇವಾ ಪ್ರತಿನಿಧಿ ಕುಮಾರಿ ಭವಾನಿ, ಒಕ್ಕೂಟದ ಅಧ್ಯಕ್ಷರು ಬಾಲಕೃಷ್ಣ ದೇವಾಡಿಗ, ದೇವಸ್ಥಾನದ ಕಾರ್ಯದರ್ಶಿ ಕುಸುಮಾಕರ, ಸಂತೋಷ್ ಜೈನ, ಶ್ರೀಮತಿ ಸವಿತಾ, ಶ್ರೀಮತಿ ವಿಜಯ, ಶಿನಪ್ಪ ಗೌಡ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಊರ ಭಕ್ತರು ಉಪಸ್ಥಿತರಿದ್ದರು.

Leave a Reply

error: Content is protected !!