
ನೇಸರ ಫೆ.20: ಕೊಕ್ಕಡ- ಕೌಕ್ರಾಡಿ ಸಂತ ಜಾನ್ ಬ್ಯಾಪ್ಟಿಸ್ಟ್ ದೇವಾಲಯದ ವಾರ್ಷಿಕ ಹಬ್ಬದ ಪ್ರಯುಕ್ತ ಫೆ. 22ರಂದು “ಭ್ರಾತೃತ್ವ ಭಾನುವಾರ” ಆಚರಿಸಲಾಯಿತು. ದೇವಾಲಯದ ಫಾದರ್ ಜಗದೀಶ್ ಪಿಂಟೋ ರವರ ಉಪಸ್ಥಿತಿಯಲ್ಲಿ, ಉಜಿರೆಯ ದಯಾಳ್ ಬಾಗ್ ಆಶ್ರಮದ ನಿರ್ದೇಶಕರಾದ ಫಾದರ್ ಪ್ಯಾಡ್ರಿಕ್ ಬ್ರ್ಯಾಗ್ಸ್ ಇವರು ದಿವ್ಯಬಲಿಪೂಜೆಯನ್ನು ಅರ್ಪಿಸಿ,ಪರಮಪ್ರಸಾದ ಆರಾಧನೆ ಹಾಗೂ ಕೊಕ್ಕಡ-ಜೋಡುಮಾರ್ಗದ ವರೆಗೆ ಮೆರವಣಿಗೆಯಲ್ಲಿ ಭಾಗವಹಿಸಿ ನಾಡಿನ ಸಮಸ್ತ ಜನರಿಗೆ ದೇವರ ಕೃಪಾಶೀರ್ವಾದಗಳನ್ನು ಕೋರಿದರು.


ಈ ಸಂದರ್ಭದಲ್ಲಿ ಧರ್ಮಕೇಂದ್ರದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಕ್ರೈಸ್ತ ಭಕ್ತಾದಿಗಳು ಭಾಗವಹಿಸಿದರು.
—ಜಾಹೀರಾತು—



