ಕ್ಲಾಸ್​​ ರೂಮ್​​ನಲ್ಲೇ ನಿದ್ದೆಗೆ ಜಾರಿದ ಶಿಕ್ಷಕಿ, ಬೀಸಣಿಗೆಯಿಂದ ಗಾಳಿ ಹಾಕಿದ ಪುಟ್ಟ ಮಕ್ಕಳು

ಶೇರ್ ಮಾಡಿ

ಕ್ಲಾಸ್​​ ರೂಮ್​​ನಲ್ಲೇ ಗಡದ್ದಾಗಿ ನಿದ್ದೆಗೆ ಜಾರಿದ ಶಿಕ್ಷಕಿಯೊಬ್ಬಳಿಗೆ ಪುಟ್ಟ ಮಕ್ಕಳು ಬೀಸಣಿಗೆಯಿಂದ ಗಾಳಿ ಹಾಕುತ್ತಿರುವ ದೃಶ್ಯ ಉತ್ತರ ಪ್ರದೇಶದ ಅಲಿಗಢದ ಶಾಲೆಯೊಂದರಲ್ಲಿ ಕಂಡುಬಂದಿದೆ.

ಈ ನಾಚಿಕೆಗೇಡಿನ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಎಲ್ಲೆಡೆ ವೈರಲ್​​​ ಆಗುತ್ತಿದ್ದಂತೆ ಮಕ್ಕಳ ಪೋಷಕರು ಗಲಿಬಿಲಿಗೊಂಡಿದ್ದು, ಶಿಕ್ಷಕಿಯ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಶಾಲಾ ಆಡಳಿತ ಮಂಡಳಿಗೆ ಆದೇಶಿಸಿದ್ದಾರೆ.

ಅಲಿಗಢದ ಧನಿಪುರ ಬ್ಲಾಕ್‌ನ ಗೋಕುಲ್‌ಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಫ್ಯಾನ್​​​​​ ವ್ಯವಸ್ಥೆ ಇಲ್ಲದಿರುವ ಕಾರಣದಿಂದಾಗಿ ಶಿಕ್ಷಕಿ ಮಕ್ಕಳ ಕೈಗೆ ಬೀಸಣಿಗೆ ಕೊಟ್ಟು ಗಾಳಿ ಹಾಕಲು ಹೇಳಿ ನಿದ್ರೆಗೆ ಜಾರಿದ್ದಾಳೆ. ಪುಟ್ಟ ಮಕ್ಕಳು ಗಾಳಿ ಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Leave a Reply

error: Content is protected !!