ನೆಲ್ಯಾಡಿ-ಕೌಕ್ರಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ರವಿಚಂದ್ರ ಗೌಡ ಅತ್ರಿಜಾಲು ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೌಕ್ರಾಡಿ-ನೆಲ್ಯಾಡಿ ಇದರ 42ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ರವಿಚಂದ್ರ ಗೌಡ ಅತ್ರಿಜಾಲು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಿತ್ ಎಂ.ಟಿ.ಆಯ್ಕೆಯಾಗಿದ್ದಾರೆ.

ಜು.18ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 41ನೇ ವರ್ಷದ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿನೋದ್‌ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು.

ಉಪಾಧ್ಯಕ್ಷರಾಗಿ ರಮೇಶ್ ಶೆಟ್ಟಿ ಬೀದಿಮನೆ, ಕೋಶಾಧಿಕಾರಿಯಾಗಿ ರವಿಚಂದ್ರ ಗೌಡ ಹೊಸವಕ್ಲು, ಜೊತೆ ಕಾರ್ಯದರ್ಶಿಯಾಗಿ ರಮೇಶ ಬಾಣಜಾಲು ಆಯ್ಕೆಗೊಂಡಿದ್ದಾರೆ. ಸದಸ್ಯರಾಗಿ ಮೋಹನ್ ಗೌಡ ಕಟ್ಟೆಮಜಲು, ಮಂಜುನಾಥ ಗೌಡ, ಚಂದ್ರಶೇಖರ ಬಾಣಜಾಲು, ಉಮೇಶ ಪೂಜಾರಿ ಪೊಸೊವಳಿಕೆ, ರವಿಪ್ರಸಾದ್ ಶೆಟ್ಟಿ ರಾಮನಗರ, ರವಿಪ್ರಸಾದ್ ಗುತ್ತಿನಮನೆ, ಸುಂದರ ಗೌಡ ಅತ್ರಿಜಾಲು, ಸುರೇಶ ಪಡಿಪಂಡ, ಶ್ರೀಧರ್ ನೂಜಿನ್ನಾಯ, ವಿನೋದ್‌ಕುಮಾರ್ ವಿ.ಜೆ., ಪ್ರಹ್ಲಾದ್ ಶೆಟ್ಟಿ ಕೊಲ್ಯೊಟ್ಟು, ಲೋಕೇಶ್ ಕೊಲ್ಯೊಟ್ಟು, ಕುಶಾಲಪ್ಪ ದರ್ಖಾಸು, ಮಹೇಶ್ ಕುಲಾಲ್, ಮೋಹನ ಶಿಶಿಲ, ರಾಕೇಶ್ ಎಸ್.ಗೌಡ, ರಘುನಾಥ ಕೆ., ನವೀನ್ ಕೊಪ್ಪ, ಪ್ರಶಾಂತ ಶೆಟ್ಟಿ ಪರಾರಿ, ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ರಾಜಶೇಖರ್ ವಿನಾಯಕ, ಉದಯಕುಮಾರ್ ದೊಂತಿಲ, ಚಂದ್ರಶೇಖರ ರಾಮನಗರ, ಚಂದ್ರಶೇಖರ ಗೋಳಿತ್ತೊಟ್ಟು, ದಯಾನಂದ ಆದರ್ಶ, ಕೇಶವ ನೆಕ್ಕರೆ, ದೀಪಕ್, ಅಣ್ಣಿ ಎಲ್ತಿಮಾರ್, ದಿನೇಶ್ ನಾಯ್ಕ್ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಡಾ.ಸದಾನಂದ ಕುಂದರ್, ಪ್ರಧಾನ ಕಾರ್ಯದರ್ಶಿ ಸುಧೀರ್‌ಕುಮಾರ್ ಕೆ.ಎಸ್., ಗೌರವ ಸಲಹೆಗಾರ ಟಿ.ಕೆ.ಶಿವದಾಸನ್ ಉಪಸ್ಥಿತರಿದ್ದರು.

Leave a Reply

error: Content is protected !!