ಬೆಳ್ತಂಗಡಿ: ದ.ಕ.ಜಿಲ್ಲಾ ಗೊಲ್ಲ(ಯಾದವ)ಸಮಾಜ ಸೇವಾ ಸಂಘದ ವತಿಯಿಂದ ಅಶ್ವತ್.ಎಸ್ ಅವರಿಗೆ ಸನ್ಮಾನ

ಶೇರ್ ಮಾಡಿ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಗೊಲ್ಲ(ಯಾದವ)ಸಮಾಜ ಸೇವಾ ಸಂಘ ಮಂಗಳೂರು, ಬೆಳ್ತಂಗಡಿ ವಲಯದ ವತಿಯಿಂದ ಅಶ್ವಥ್.ಎಸ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಬೆಳ್ತಂಗಡಿ ದಿವಂಗತ ಶಿವರಾಮ ಗೊಲ್ಲ ಹಾಗೂ ಶ್ರೀಮತಿ ಭಾಗೀರಥಿ ದಂಪತಿಗಳ ಪ್ರಥಮ ಪುತ್ರ ಅವರು 2024ರ ಸಾಲಿನಲ್ಲಿ ನಡೆದ ಅಖಿಲ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯವರು ನಡೆಸುವ ಸಿಎ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕದೊಂದಿಗೆ ಉತ್ತೀರ್ಣರಾಗಿ ಗೊಲ್ಲ ಸಮಾಜಕ್ಕೆ ಕೀರ್ತಿ ತಂದ ಅಶ್ವತ್.ಎಸ್ ಅವರನ್ನು ಅವರ ಮನೆಯಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ರಾಜೇಶ್ ರಾವ್ ಅಳದಂಗಡಿ, ಅಧ್ಯಕ್ಷರಾದ ಎಚ್ ರತ್ನಾಕರ ರಾವ್ ಕಾಶಿಪಟ್ಣ, ಉಪಾಧ್ಯಕ್ಷರಾದ ಜಯಚಂದ್ರ.ಎಂ.ಪಿ ಮುಂಡಾಜೆ, ಕೋಶಾಧಿಕಾರಿ ರಮಾನಂದ.ಕೆ ಉಜಿರೆ, ಸುಭಾಶ್ಚಂದ್ರ.ಕೆ ಕಾಶಿಪಟ್ಣ, ಕಾಶಿಪಟ್ಣ ಶ್ರೀ ಆದಿಶಕ್ತಿ ಅಮ್ಮನವರ ದೇವಸ್ಥಾನದ ಅರ್ಚಕ ಹರೀಶ್.ಕೆ ಉಪಸ್ಥಿತರಿದ್ದರು.

Leave a Reply

error: Content is protected !!