ಕೊಕ್ಕಡ:ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ಸಮೀಪದ ಬೈಲಂಗಡಿ ಎಂಬಲ್ಲಿ ಆ.2ರಂದು ರಾತ್ರಿ ಸುರಿದ ಬಾರಿ ಮಳೆಗೆ ಯೂಸುಫ್ ಬೈಲಂಗಡಿ ಎಂಬುವರ ಮನೆಯ ಅಡುಗೆ ಕೋಣೆಯ ಗೋಡೆ ಕುಸಿದು ಬಿದ್ದು ಸಂಪೂರ್ಣ ಹಾನಿಗೊಂಡ ಘಟನೆ ನಡೆದಿದೆ.
ಸ್ಥಳಕ್ಕೆ ಕೊಕ್ಕಡ ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.