ಗುತ್ತಿಗಾರು ಬ್ಲೆಸ್ಡ್ ಕೊರಿಯ ಕೋಸ್ ವಿದ್ಯಾ ಸಂಸ್ಥೆಯಲ್ಲಿ ನೂತನ ಶಿಕ್ಷಕ ರಕ್ಷಕ ಸಂಘ ರಚನೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಮಾಡಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಸೈಂಟ್ ಮೇರಿಸ್ ಚರ್ಚಿನ ಧರ್ಮ ಗುರುಗಳಾದ ವಂ. ಫಾ.ಆದರ್ಶ್ ಜೋಸೆಫ್ ಅವರು ಭಾಗವಹಿಸಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತನ್ನು ಮೂಡಿಸುವುದು ಪೋಷಕರ ಕರ್ತವ್ಯ ಎಂದು ಹೇಳಿದರು.
2022-2024ರ ವರೆಗಿನ ಶಿಕ್ಷಕ ರಕ್ಷಕ ಸಂಘದ ಗತ ಸಭೆಯ ವರದಿಯನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಲಿಜೋ ಜೋಸ್ ಅವರು ಮಂಡಿಸಿದರು. ಮಾಜಿ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಯೋಗಾಸನ ಸ್ಪರ್ಧೆಯಲ್ಲಿ 4ಬಾರಿ ವಿಶ್ವ ದಾಖಲೆ ಮಾಡಿ ಗುರುತಿಸಿಕೊಂಡ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ ಅವರನ್ನು ಶಾಲಾವತಿಯಿಂದ ಸನ್ಮಾನಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಟ್ರೀಸ ಜಾನ್ ಅವರ ನೇತೃತ್ವದಲ್ಲಿ 2024-2025ರ ಶೈಕ್ಷಣಿಕ ವರ್ಷಕ್ಕೆ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಲಿಜೋ ಜೋಸ್, ಉಪಾಧ್ಯಕ್ಷ ಸಂತೋಷ್ ಪಳಂಗಾಯ, ಪದಾಧಿಕಾರಿಗಳಾಗಿ ನವೀನ್ ಕುಮಾರ್ ಜಾಕೆ, ಪುರುಷೋತ್ತಮ ಅವರು ಆಯ್ಕೆಯಾದರು.
ಆಯ್ಕೆಯಾದವರಿಗೆ ಮುಖ್ಯ ಅತಿಥಿಗಳು ಶಾಲು ಹೊದಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ರಮ್ಯ ಪ್ರಾರ್ಥಿಸಿದರು, ತಾರವೇಣಿ ಸ್ವಾಗತಿಸಿದರು, ಶಿಕ್ಷಕ ರಜನೀಶ್ ವಂದಿಸಿದರು. ಶಿಕ್ಷಕಿ ಶಾಂತಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು.