ಬೀಳ್ಕೊಡುಗೆ ಹಾಗೂ ಘಟಿಕೋತ್ಸವ : ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ನೆಲ್ಯಾಡಿ

ಶೇರ್ ಮಾಡಿ

ನೇಸರ 30: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ನೆಲ್ಯಾಡಿ ಇದರ 21 ನೇ ಸಾಲಿನ ಶೈಕ್ಷಣಿಕ ವರ್ಷದ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಘಟಿಕೋತ್ಸವ ಕಾರ್ಯಕ್ರಮವು ಬೆಥನಿ ಸಭಾಂಗಣದಲ್ಲಿ ನೆರೆವೇರಿತ್ತು. ಸಭಾಧ್ಯಕ್ಷತೆಯನ್ನು ಬೆಥನಿ ವಿದ್ಯಾಸಂಸ್ಥೆಗಳ ನಿರ್ದೇಶಕರು ರೆ.ಫಾ.ಸತ್ಯಯನ್ ತೋಮಸ್ OIC ವಹಿಸಿದರು ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಪ್ರಾಂಶುಪಾಲ ಸಜಿ.ಕೆ ತೋಮಸ್  ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು, ಎಸ್.ಬಿ.ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ ಮೆಲ್ವಿನ್ ಮ್ಯಾಥ್ಯೂ OIC ಕೌಶಲ್ಯ ಭರಿತ ಐಟಿಐ ವಿದ್ಯಾರ್ಥಿಗಳೇ ದೇಶದ ಪ್ರಮುಖ ಫೌಂಡೇಶನ್ ಪಿಲ್ಲರ್ ಗಳು ಎಂದರು, ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪಿ ಯು ಕಾಲೇಜಿನ ಪ್ರಾಂಶುಪಾಲ ರೆ.ಫಾ ಥಾಮಸ್ ಬಿಜಿಲಿ OIC ಶುಭಹಾರೈಸಿದರು . ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ತರಬೇತಿ ಅಧಿಕಾರಿ ಜಾನ್ ಪಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಹಾಸ್ ನಾಯ್ಕ್ ಪ್ರಾರ್ಥಿಸಿದರು, ಅಜಿತ್ ಸ್ವಾಗತಿಸಿದರು, ಯಶೋಧರ ವಂದಿಸಿದರು, ರಂಜನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!