||ರಾಜ್ ಕುಮಾರ ಅಮರ|| – ಬಾನ ದಾರಿಯಲ್ಲಿ ಜಾರಿ ಹೋದ ತಾರೆ

ಶೇರ್ ಮಾಡಿ

ನೇಸರ 30: ಕನ್ನಡ ಚಿತ್ರೋದ್ಯಮ “ಸ್ಯಾಂಡಲ್ ವುಡ್” ಸದ್ಯ ಆಘಾತಕಾರಿ ವಾರ್ತೆಯನ್ನು ಜೀರ್ಣಿಸಲು ತಿಣುಕಾಡುತ್ತಿದೆ, ಪ್ರಕೃತಿಯ ಶಿಶು ಮನುಷ್ಯ ಸಾವಿಗೆ ಶರಣಾಗುವುದು ಸಹಜ, ಚಿತ್ರೋದ್ಯಮದಲ್ಲಿ ಹಲವಾರು ಹಿರಿತಲೆಗಳು ತೆರೆಮರೆಗೆ ಸರಿಯುತ್ತಿರುವ ಸುದ್ದಿ ಕಾಲದಲ್ಲಿ ಪ್ರವೃದ್ಧಮಾನ ಉಚ್ಚಾಯ ಸ್ಥಿತಿಯಲ್ಲಿ ಕನ್ನಡದ ಮೇರು ನಟನೊಬ್ಬ ತೆರೆಯ ಮರೆಗೆ ಸರಿಯುತ್ತಿರುವುದು ನಿಜಕ್ಕೂ ವಿಷಾಧಾನಿಯ.
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಪುನೀತ್ ಕನ್ನಡದ “ಎವರ್ ಗ್ರೀನ್” ನಟ ಕನ್ನಡ ಚಿತ್ರರಂಗದ ಮೇರು ವೈಭವ ದೊಡ್ಮನೆಯ ಕಿರಿಯ ಕೊಂಡಿ ಪವರ್ ಸ್ಟಾರ್ ನಂತಹ ಹೃದಯ ವಂತನ ಹೃದಯವೇ ಘಾತವಾದುದು ವಿಶೇಷ. 17 ಮಾರ್ಚ್ 1975 ರಲ್ಲಿ ಜನಿಸಿದ ಈ ರಾಜಕುಮಾರ ತನ್ನ 46 ನೇ ವಯಸ್ಸಿನ ಕಿರು ಅವಧಿಗೆ ಸಾಧನೆಯ ಹಾದಿಗೆ ಬೆಳ್ಳಿಚಿಕ್ಕಿ ಇಟ್ಟಿರುವುದು ಅಭಿಮಾನಿಗಳನ್ನು ನೋವಿನ ಅಲೆಗಳಲ್ಲಿ ತೇಲಿಸುತ್ತಿದೆ, ಸ್ಯಾಂಡಲ್‍ವುಡ್‍ಗೆ ತುಂಬಲಾರದ ನಷ್ಠ, ನಾಯಕ, ಗಾಯಕ, ನಿರ್ಮಾಪಕ- ನಿರೂಪಕನಾಗಿ ವಿಜ್ರಂಬಿಸಿದ ಅಪ್ಪು, ಅಭಿ, ದೊಡ್ಮನೆ ಹುಡುಗ, ಯುವರತ್ನ, ನಟಸಾರ್ವಬೌಮ, ಗೊಂಬೆ ಹೇಳುತೈತೆ, ರಾಜಕುಮಾರದಂತಹ ಸಾಲು ಸಾಲು ಸೂಪರ್ ಹಿಟ್ ಯಶಸ್ವಿ ಸಿನಿಮಾಗಳನ್ನು ನೀಡಿದ ಕನ್ನಡ ಚಿತ್ರರಂಗದ ದ್ರುವತಾರೆ,
ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ, ಸೈಮಾ ಅವಾರ್ಡ್, ಪಿಲಂಫೇರ್ ಅವಾರ್ಡ್‍ನಂತಹ ಹಲವಾರು ಪ್ರಶಸ್ತಿ ಪಾರಿತೋಷಕಗಳನ್ನು ಪಡೆದ ಕನ್ನಡದ ಪ್ರಬುದ್ಧ ನಟ. ನಿಜ ಅರ್ಥದಲ್ಲಿ ಹೃದಯವಂತನೂ.
26 ಅನಾಥಾಶ್ರಮ, 45 ಉಚಿತ ಶಾಲೆ, 16 ವೃಧ್ಧಾಶ್ರಮ, 19 ಗೋಶಾಲೆ, 1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿಧಾಮ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಏಕೈಕ ಕನ್ನಡ ನಟ ಬಾರದೂರಿನ ಪಯಣದ ಹಾದಿಯಲ್ಲಿ ಸಾಗಿದ್ದಾರೆ ಸಹಸ್ರ ಸಂಖ್ಯೆಯ ಅಭಿಮಾನಿಗಳ ಅಶ್ರುತರ್ಪಣದ ಮದ್ಯೆ ಕಂಠೀರವ ಕ್ರೀಡಾಂಗಣದಲ್ಲಿ ಸಾವಿರಾರು ಬಿಂದು ಕಣ್ಣಿರಿನ ಸಿಂಚನದೊಂದಿಗೆ ನಾಳೆ ಪಂಚ ಭೂತಗಳಲ್ಲಿ ಲೀನವಾಗಲಿದ್ದಾರೆ.

        ಏನೀ ಪ್ರಕೃತಿಯ ಮಾಯೆ, ಏನಿದ್ದರೂ ಪುನೀತ್ ಮತ್ತೊಂಮ್ಮೆ ಮರಳಿಬಾರದ ಬೆಟ್ಟದ ಹೂ

Leave a Reply

error: Content is protected !!