ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾಲ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಶಾಲೆಯಿಂದ ನೆಕ್ಕಿಲಾಡಿ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಪಡುಬೆಟ್ಟು ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ನಿವೃತ್ತ ಬಿ.ಎಸ್.ಎನ್.ಎಲ್. ಉದ್ಯೋಗಿ, ದಾನಿಗಳು ಹಾಗೂ ಪೋಷಕರಾಗಿರುವ ಡಾಕಯ್ಯ ಗೌಡ ಇವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಪಥಸಂಚಲನ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಪ್ರಕಾಶ್ ಪೂಜಾರಿ, ಜಯಲಕ್ಷ್ಮಿ , ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಪ್ರಸಾದ್ ಬೀದಿಮಜಲು, ಡಾಕಯ್ಯ ಗೌಡ, ಶಿಕ್ಷಕಿ ಕವಿತಾ.ಡಿ ಉಪಸ್ಥಿತರಿದ್ದರು.
ಜಿಪಿಟಿ ಶಿಕ್ಷಕಿ ಗೀತಾ ಬಿ.ಎಸ್. ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಿದರು. ಸಹಶಿಕ್ಷಕಿ ಮಮತಾ.ಸಿ.ಹೆಚ್. ಸನ್ಮಾನ ಪತ್ರ ವಾಚಿಸಿದರು. ಗೌರವಶಿಕ್ಷಕಿ ನ್ಯಾನ್ಸಿ ಲಿಝಿ ಬೀಳ್ಗೊಳ್ಳುವ ಶಿಕ್ಷಕಿಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ಮುಖ್ಯಶಿಕ್ಷಕಿ ಜೆಸ್ಸಿ.ಕೆ.ಎ ಸ್ವಾಗತಿಸಿದರು. ಸಹಶಿಕ್ಷಕಿ ಸಜಿನ ಕೆ.ಎ. ವಂದಿಸಿದರು. ಸಹಶಿಕ್ಷಕಿ ಕಮಲಾಕ್ಷಿ.ಕೆ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಲೀಲಾವತಿ.ಎಂ ಸಹಕರಿಸಿದರು. ವಿದ್ಯಾರ್ಥಿಗಳಾದ ಮೆಲಿಷ, ಐಶ್ವರ್ಯ, ಧನ್ಯಶ್ರೀ, ಪ್ರಾಪ್ತಿ, ವರ್ಷ ಪ್ರಾರ್ಥಿಸಿದರು. ಎಸ್.ಡಿ.ಎಂ.ಸಿ. ಸದಸ್ಯರು, ಪೋಷಕರು ಹಾಗೂ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.