ಮಂಗಳೂರು:ಕೇರಳದ ಕೊಟ್ಟಯಂ ಜಿಲ್ಲೆಯ ಪಾಲ ಸೆಂಟ್ ಅಲ್ಫೋನ್ಸಿಯನ್ ಸೆಂಟರ್ ನಲ್ಲಿ ನಡೆದ ಜಾಗತಿಕ ಸೀರೋ ಮಲಬಾರ್ ಧರ್ಮ ಸಭೆಯ ಐದನೇಜಾಗತಿಕ ಧರ್ಮ ಸಂಸದ್ ನಲ್ಲಿ ಸೀರೋ ಮಲಬಾರ್ ಧರ್ಮ ಸಭೆಯ ಸುಮಾರು ಐದು ಭೂಖಂಡಗಳ ಹದಿನಾರು ದೇಶಗಳ ಮೂವತ್ತಾಯಿದು ಧರ್ಮ ಪ್ರಾಂತ್ಯಗಳ ಆಯ್ದ 348 ಮಂದಿ ಪ್ರತಿನಿದಿಗಳ ಸಮ್ಮೇಳನವು ಅ.22 ರಿಂದ ಅ.25ರ ವರೆಗೆ ಯಶಸ್ವಿಯಾಗಿ ಜರಗಿತು.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರ ಮತ್ತು ಪಶು ಸಂಗೋಪನಾ ಸಚಿವ ಜೋರ್ಜ್ ಕುರಿಯನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದರು. ಬೆಳ್ತಂಗಡಿ ಧರ್ಮಪ್ರಾಂತ್ಯ ದಿಂದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ, ವಿಕಾರ್ ಜೆನೆರಲ್ ಅತಿ ವಂ.ಫಾ.ಜೋಸ್ ವಲಿಯಪರಂಭಿಲ್, ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂ.ಫಾ. ಶಾಜಿ ಮಾತ್ಯು ಕ್ಯಾಥೋಲಿಕ್ ಯೂನಿಯನ್ ನಿಕಟ ಪೂರ್ವ ಅಧ್ಯಕ್ಷರು ಧರ್ಮಪ್ರಾಂತಿಯ ಪಾಲನ ಸಮಿತಿಯ ಸದಸ್ಯರು ಹಿರಿಯ ವಕೀಲರು ಆದ ಸೇವಿಯಾರ್ ಪಾಲೇಲಿ, ಧರ್ಮಪ್ರಾಂತ್ಯದ ಕೇಂದ್ರ ಪಾಲನ ಸಮಿತಿಯ ಸದಸ್ಯರು ಎ ಕೆ ಸಿ ಸಿ ಜಾಗತಿಕ ಕಾರ್ಯದರ್ಶಿ ಜೈಸನ್ ಪಟ್ಟೀರಿ, ಮಾತೃ ವೇದಿಕೆ ಧರ್ಮ ಪ್ರಾಂತಿಯ ಅಧ್ಯಕ್ಷೆ ಮೆರ್ಸಿ ಚಾಕೋ ಬಜಗೋಳಿ, ಮಾಡಾಂತ್ಯಾರು ಕಾಲೇಜಿನ ಪ್ರಾದ್ಯಪಕರಾದ ಶ್ರೀ ಅಲ್ವಿನ್ ಕೊಚ್ಚು ಪುರಕಲ್ ವೇಣೂರು ಬಾಗವಹಿಸಿದರು.
ಈ ಕಾರ್ಯಕ್ರಮವು ಸೀರೋ ಮಲಬಾರ್ ಸಭೆಯ ಭವಿಷ್ಯದ ಮಾರ್ಗದರ್ಶನಕ್ಕಾಗಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲು ವೇದಿಕೆ ಒದಗಿಸಿತು ಮತ್ತು ಪ್ರತಿನಿಧಿಗಳಿಂದ ಅತ್ಯಧಿಕ ಸಹಕಾರವನ್ನು ಪಡೆದಿತು.