ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಶಿವಾನಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸ್ವಉದ್ಯೋಗ ಪ್ರೇರಣಾ ಶಿಬಿರವನ್ನು ಮಂಗಳವಾರ ನೆಲ್ಯಾಡಿ ಶಬರೀಶ ಕಲಾ ಮಂದಿರದಲ್ಲಿ ನಡೆಯಿತು.
ಜ್ಞಾನವಿಕಾಸ ಕೇಂದ್ರದ ಸದಸ್ಯೆ ಅನಿತಾ ಅವರು ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಬದುಕು ಕಟ್ಟಿಕೊಳ್ಳಲು ಸ್ವದ್ಯೋಗ ಪ್ರೇರಣಾ ಶಿಬಿರವು ದಾರಿ ದೀಪವಾಗಿದೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾತ್ರ ಸಾಧ್ಯ ಎಂದು ಶುಭಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರುಡ್ ಸೆಟ್ ಸಂಸ್ಥೆಯ ಉಪನ್ಯಾಸಕ ಅಬ್ರಾಹಾಂ ಜೇಮ್ಸ್ ಅವರು ರುಡ್ ಸೆಟ್ ಸಂಸ್ಥೆಯಲ್ಲಿ ನೀಡುವ ತರಬೇತಿಗಳು ಹಾಗೂ ಸಂಸ್ಥೆಯ ಉದ್ದೇಶ ಮತ್ತು ಯುವಕ ಯುವತಿಯರು ನಿರುದ್ಯೋಗಿಗಳಾಗಿ ಉಳಿಯದೆ ಸ್ವಾವಲಂಬಿ ಜೀವನವನ್ನು ನಡೆಸುವ ಬಗ್ಗೆ ತರಬೇತಿ ನೀಡಿದರು. ನೆಲ್ಯಾಡಿ ಜೆಸಿಐ ಅಧ್ಯಕ್ಷ ಸುಚಿತ್ರ ಬಂಟ್ರಿಯಾಲ್, ನೆಲ್ಯಾಡಿ ಅಯ್ಯಪ್ಪ ದೇವಸ್ಥಾನದ ಕಾರ್ಯದರ್ಶಿ ಸುಧೀರ್ ಕುಮಾರ್, ಸಂಯೋಜಕಿ ಪೂರ್ಣಿಮಾ ಉಪಸ್ಥಿತರಿದ್ದು ಶುಭಹಾರೈಸಿದರು.
ಸಮನ್ವಯಧಿಕಾರಿ ಚೇತನಾ.ಜಿ ಪ್ರಾಸ್ತವಿಕ ಮಾತುಗಳನಾಡಿದರು. ಸಂಯೋಜಕಿ ಪೂರ್ಣಿಮಾ ಸ್ವಾಗತಿಸಿದರು. ಸೇವಾಪ್ರತಿನಿಧಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು, ಕೇಂದ್ರದ ಸದಸ್ಯರಾದ ಸುನಿತಾ ವಂದಿಸಿದರು. ವಲಯದ ಸೇವಾ ಪ್ರತಿನಿಧಿಗಳಾದ ನಮಿತಾ ಶೆಟ್ಟಿ, ಸುಮನ, ವೇದಾವತಿ, ಸಂತೋಷ್, ಕವಿತಾ ಸಹಕರಿಸಿದರು.
ಶಿವಾನಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಗೂ ಸ್ವಉದ್ಯೋಗ ಪ್ರೇರಿತ ಸದಸ್ಯರು ತರಬೇತಿಯನ್ನು ಪಡೆದುಕೊಂಡು ಸ್ವ ಉದ್ಯೋಗ ತರಬೇತಿಗೆ ಆಯ್ಕೆಯಾದರು.