ಹಿಂದೂ ಸಮಾಜದ ಸದೃಢವಾದ ಮರಯೊಂದಕ್ಕೆ ದೇವಸ್ಥಾನ, ಭಜನಮಂದಿರ ಗಳೇ ತಾಯಿಬೇರುಗಳು- ಸುಬ್ರಹ್ಮಣ್ಯ ಪ್ರಸಾದ್

ಶೇರ್ ಮಾಡಿ

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ತಾಲೂಕು ಯೋಜನಾ ಕಚೇರಿ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ತಾಲೂಕು ಸಭೆಯನ್ನು ಉದ್ಘಾಟಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯ ಸಂಚಾಲಕರಾದ ಸುಬ್ರಮಣ್ಯ ಪ್ರಸಾದ್ ಮಾತನಾಡಿ ಭಜನೆ ಎಂಬುವುದು ಸಂಸ್ಕೃತಿ ಸಂಸ್ಕಾರಗಳನ್ನು ಮೂಡಿಸಿ ಸರಳತೆಯ ಭಕ್ತಿ ಇಂದ ದೇವರನ್ನು ಉಳಿಸಿಕೊಳ್ಳುವ ಸುಲಭ ವಿಧಾನವಾಗಿರುತ್ತದೆ.. ಭಜನೆ ಕಾರ್ಯಕ್ರಮಗಳನ್ನು ನಡೆಸಿ ಸಾರ್ವಜನಿಕರ ಒಗ್ಗೂಡಿಕೆ ಯೊಂದಿಗೆ ಮಕ್ಕಳಲ್ಲಿ ಹಾಗೂ ಮನೆ ಮಂದಿಯಲ್ಲಿ ಸಂಸ್ಕಾರ ಯುತ ಜೀವನವನ್ನು ನಡೆಸಲು ಭಜನಾ ಪರಿಷತ್ತು ಸದಸ್ಯರು ಶ್ರಮಿಸಿದಲ್ಲಿ ಕಡಬ ತಾಲೂಕು ಭಜನಾ ಪರಿಷತ್ತು ರಾಜ್ಯದಲ್ಲಿ ಗುರುತಿಸುವ ಸ್ಥಾನದಲ್ಲಿರುತ್ತದೆ ದೇವಸ್ಥಾನ ಭಜನಾ ಮಂದಿರಗಳು ಹಿಂದೂ ಧರ್ಮದ ಬದ್ರ ಬುನಾದಿಯಾಗಿದ್ದು ಬೃಹತ್ ಆಕಾರದ ಮರ ಒಂದಕ್ಕೆ ಬೇರುಗಳಿದ್ದಂತೆ ಇದನ್ನು ಪೋಷಿಸಿ ಉತ್ತಮ ನಿರ್ವಹಣೆಯೊಂದಿಗೆ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಸುಂದರ ಗೌಡ ಓಗ್ಗು ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಸದಾನಂದ ಆಚಾರ್ಯ, ರಾಜ್ಯ ಭಜನಾ ಪರಿಷತ್ ಸಮನ್ವಯಾಧಿಕಾರಿ ಸಂತೋಷ್ ಶ್ರೀ ಮಾಹಾಲಿಂಗೇಶ್ವರ ದೇವಸ್ಥಾನ ಮರ್ದಾಳ ಇದರ ಜಿರ್ಣೋದ್ಧಾರ ಸಮಿತಿ ಸದಸ್ಯ ಸತ್ಯನಾರಾಯಣ ಹೆಗ್ಡೆ ಉಪಸ್ಥಿತರಿದ್ದರು.

ತಾಲೂಕು ಯೋಜನಾಧಿಕಾರಿ ಮೇದಪ್ಪಗೌಡ ಎನ್ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿದರು . ನೆಲ್ಯಾಡಿ ವಲಯದ ಮೇಲ್ವಿಚಾರಕರಾದ ಆನಂದ್. ಡಿ.ಬಿ ವಂದಿಸಿದರು.ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು

ಕಾರ್ಯಕ್ರಮದಲ್ಲಿ ತಾಲೂಕಿನ ಭಜನಾ ಪರಿಷತ್ ಪದಾಧಿಕಾರಿಗಳು, ಭಜನಾ ಮಂಡಳಿ ಪ್ರತಿನಿಧಿಗಳು, ತಾಲೂಕಿನ ಎಲ್ಲಾ ಮೇಲ್ವಿಚಾರಕರು ಸೇವಾಪ್ರತಿನಿಗಳು ಉಪಸ್ಥಿತರಿದ್ದರು

Leave a Reply

error: Content is protected !!