ಕಬಕ ಗ್ರಾ.ಪಂ.ವ್ಯಾಪ್ತಿಯ ಕೂವೆತ್ತಿಲ ಎಂಬಲ್ಲಿ ಪಿಕ್ ಅಪ್ ವಾಹನದಿಂದ ರಸ್ತೆ ಬದಿ ಪ್ಲಾಸ್ಟಿಕ್ ಕಸ ಎಸೆಯುತ್ತಿರುವ ಸಂದರ್ಭ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿಯವರು ಕಸ ಎಸೆದವರಿಗೆ ಕಬಕ ಗ್ರಾಮ ಪಂಚಾಯತ್ ಮೂಲಕ 3 ಸಾವಿರ ರೂ. ದಂಡ ವಿಧಿಸಿದ ಘಟನೆ ಆ.28 ರಂದು ಸಂಜೆ ನಡೆದಿದೆ.
ಬೆಂಗಳೂರು ಮೂಲದ 3 ಜನರ ಕಾರ್ಮಿಕರು ಎಲೆಕ್ಟ್ರಿಕಲ್ ಸಂಬಂಧಿಸಿದ ಕಾಮಗಾರಿಗಳ ಪ್ಲಾಸ್ಟಿಕ್ ಕಸ ಇತ್ಯಾದಿಗಳನ್ನು ಎಸೆಯುತ್ತಿರುವುದನ್ನು ಗಮನಿಸಿದ ಕಾರ್ಯನಿರ್ವಾಹಕ ಅಧಿಕಾರಿ ಕಬಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾ ಅವರ ಮೂಲಕ 3 ಸಾವಿರ ರೂ. ದಂಡ ಹಾಗೂ ಎಸೆದ ಕಸವನ್ನು ಹೆಕ್ಕಿಸುವ ಕಾರ್ಯ ಮಾಡಿದ್ದಾರೆ.
ಈ ಸಂದರ್ಭ ಕಬಕ ಗ್ರಾ.ಪಂ.ಸದಸ್ಯ, ತಾ.ಪಂ.ವಿಷಯ ನಿರ್ವಾಹಕ ಸುರೇಶ್, ಎನ್ ಆರ್ ಎಲ್ ಎಂ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್, ಕಬಕ ಗ್ರಾ.ಪಂ ಲೆಕ್ಕ ಸಹಾಯಕ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.