ನಡ್ಪ-ಕಾಂಚನ‌ ನಾರಾಯಣ ಬಡಿಕಿಲ್ಲಾಯರಿಗೆ ಜೇಸಿ “ಮೌನ ಸಾಧಕ ಪುರಸ್ಕಾರ”

ಶೇರ್ ಮಾಡಿ

ನೇಸರ ಫೆ.24: “ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಮತ್ತು ಮಾನವನ ಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ” ಅನ್ನುವ ಜೇಸಿ ವಾಣಿಯ ನುಡಿಯಂತೆ ಕಾಂಚನ ನಡ್ಪ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಲ್ಕು ದಶಕಗಳ ಸೇವಾ ಕಾರ್ಯ ಮಾಡಿದ ಅರ್ಚಕರಾದ ನಾರಾಯಣ ಬಡಿಕಿಲ್ಲಾಯ ಮತ್ತು ಶ್ರೀಮತಿ ಸುಮನ ಬಡಿಕಿಲ್ಲಾಯ ಇವರ “ಷಷ್ಠಿ ಪೂರ್ತಿ ಶಾಂತಿ” ಶುಭಕಾರ್ಯದ ಸಂದರ್ಭದಲ್ಲಿ ಅವರ ಧಾರ್ಮಿಕ ಸೇವಾ ಕೈಂಕರ್ಯವನ್ನು ಗುರುತಿಸಿ ಜೇಸಿ ಉಪ್ಪಿನಂಗಡಿ ಘಟಕದ “ಮೌನ ಸಾಧಕ ಪುರಸ್ಕಾರ” ನೀಡಿ ಗೌರವಿಸಲಾಯಿತು.

ಗೌರವ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಕಾಂಚನ ಶ್ರೀಮತಿ ರೋಹಿಣಿ ಸುಬ್ಬರತ್ನಂ ನಂಬಿಕೆಯ ಬುನಾದಿ ಅಡಿಯಲ್ಲಿ ಮನುಷ್ಯ ಸಂಕುಲದ ನೋವು-ನಲಿವುಗಳಿಗೆ ಆಧ್ಯಾತ್ಮಿಕ ಜ್ಞಾನ ತುಂಬಿ ತಿಳುವಳಿಕೆಯನ್ನು ಮೂಡಿಸಿ ಸುಸಂಸ್ಕೃತ ಸಮಾಜದ ನಿರ್ಮಾಣದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ ಅರ್ಚಕರ ವ್ಯಕ್ತಿತ್ವವಾಗಿದೆ.ಅಂತಹ ವ್ಯಕ್ತಿತ್ವವನ್ನು ಗುರುತಿಸಿ ಪುರಸ್ಕಾರ ನೀಡಿದ ಜೇಸಿ ಸಂಸ್ಥೆ ಕಾರ್ಯವನ್ನು ಶ್ಲಾಘಿಸಿದರು.

ಮನೆ ಹಸ್ತಾಂತರ ವೀಕ್ಷಿಸಿ Subscribers ಮಾಡಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಮೋಹನ್ ಚಂದ್ರ ತೋಟದಮನೆ ವಹಿಸಿ,ಪ್ರಾಚೀನ ಪರಂಪರೆಯ ಮೌಲ್ಯಗಳ,ಸಂಸ್ಕೃತಿಗಳ ಅಂಶ ಗಳನ್ನು ಉದ್ದೀಪನಗೊಳಿಸಿದರನ್ನು ಗೌರವಿಸುವ ಅವಕಾಶ ಘಟಕಕ್ಕೆ ಸಿಕ್ಕಿರುವುದು ಘಟಕದ ಗೌರವ ಮತ್ತಷ್ಟು ಹೆಚ್ಚಿದೆ ಎಂದರು.ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮುಕುಂದ ಅರ್ಚಕರ ಸರಳ ಸಜ್ಜನಿಕೆಯ ವ್ಯಕ್ತಿತ್ವ, ಕಾರ್ಯಗಳು ಸಮಾಜದ ಅಂಕುಡೊಂಕುಗಳ ತಿದ್ದುವಿಕೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಇಂತಹ ಕಾರ್ಯಕ್ರಮಗಳಿಂದ ಜೇಸಿ ಸಂಸ್ಥೆ ಸಮಾಜಕ್ಕೆ ಮಾದರಿಯಾಗಿದೆ.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಜೇಸಿ.ಕೆ.ವಿ.ಕುಲಾಲ್,ಜೇಸಿ.ಪ್ರಶಾಂತ್ ಕುಮಾರ್ ರೈ,ಜೇಸಿ.ಶಶಿಧರ್ ನೆಕ್ಕಿಲಾಡಿ,ಶ್ರೀಮತಿ ಲವಿನಾ ಪಿಂಟೊ, ಜೇಸಿ.ಮಹೇಶ್ ಖಂಡಿಗ,ಕುಮಾರಿ ಸ್ಪೂರ್ತಿ,ಮಾಸ್ಟರ್ ಲಿಖಿತ್ ಉಪಸ್ಥಿತರಿದ್ದರು.

 

—ಜಾಹೀರಾತು—

Leave a Reply

error: Content is protected !!