ನೆಲ್ಯಾಡಿ:ವಿಶ್ವವಿದ್ಯಾಲಯ ಕಾಲೇಜುನಲ್ಲಿ “ಸ್ಥಳೀಯ ಇತಿಹಾಸ ಮತ್ತು ಸ್ವಾಸ್ಥ್ಯ ನಿರ್ಮಾಣ” ಉಪನ್ಯಾಸ

ಶೇರ್ ಮಾಡಿ

ನೇಸರ ಫೆ.25: ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿಯಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ “ಸ್ಥಳೀಯ ಇತಿಹಾಸ ಮತ್ತು ಸ್ವಾಸ್ಥ್ಯ ನಿರ್ಮಾಣ” ವಿಷಯದ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು. ಡಾ.ಮೋಹನ್ ದಾಸ್ ಗೌಡ, ಮುಖ್ಯಸ್ಥರು, ಪಂಚಮಿ ಹಿತಾರ್ಯುಧಾಮ ಆಯುರ್ವೇದ ಆಸ್ಪತ್ರೆ, ಕೊಕ್ಕಡ ಇವರು ಆಗಮಿಸಿದ್ದರು.ಇವರು 1936ರಲ್ಲಿ ಜನಿಸಿದವರಾಗಿದ್ದು,75 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯ ಪ್ರತ್ಯಕ್ಷದರ್ಶಿಯಾಗಿದ್ದು, ಪ್ರಾರಂಭಿಕ ಸ್ವಾತಂತ್ರ್ಯ ದಿನಾಚರಣೆಯ ನೆನಪುಗಳನ್ನು, ಪ್ರಾರಂಭಿಕ ಹಂತದ ಶಿಕ್ಷಣದ ರೀತಿಗಳನ್ನು ತಮ್ಮ ಅನುಭವಗಳನ್ನು ಹಂಚಿಕೊಂಡರು.ಗಾಂಧಿಯಿಂದ ಪ್ರೇರಿತಗೊಂಡ ಇವರು ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸದ ಮೆಲುಕುಗಳೊಂದಿಗೆ ಸ್ವಾಸ್ಥ್ಯ ಸಮಾಜದ ನಿರ್ಮಾಣದ ಕುರಿತು ವಿವರಿಸಿದರು.ಕಷ್ಟಪಡುವ ಆ ದಿನಗಳಲ್ಲಿ ಖುಷಿಯಿತ್ತು ಮತ್ತು ಶಿಕ್ಷಣದಲ್ಲಿ ಶಿಕ್ಷೆಯು ವ್ಯಕ್ತಿ ನಿರ್ಮಾಣ ಮಾಡಿದೆ,ಶಿಕ್ಷೆ ಇಲ್ಲದ ಶಿಕ್ಷಣವು ವ್ಯರ್ಥವಾಗುತ್ತಿದೆ ಎಂದರು. ಸೌಹಾರ್ದ ಸಮಾಜ ನಿರ್ಮಾಣ ಆಗಬೇಕು,ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು,ಮಾನವ ಜೀವನದಲ್ಲಿ ನೈತಿಕತೆ ಇರಬೇಕು.ಮಹಾತ್ಮ ಗಾಂಧೀಜಿಯವರ ಸ್ವಾಸ್ಥ್ಯ ಸಮಾಜ ನಿರ್ಮಾಣ ಕುರಿತು ಉಲ್ಲೇಖಿಸಿರು,ಸ್ವತಃ ಮದ್ಯವರ್ಜನ ಶಿಬಿರದಲ್ಲಿ ಅದರ ನಿರ್ಮೂಲನೆಯಲ್ಲಿ ಕಾರ್ಯನಿರತರಾಗಿರುವುದು ಅವರ ಕಾರ್ಯತತ್ಪರತೆಗೆ ನಿದರ್ಶನವಾಗಿದೆ.

ಸದ್ಭಾವನಾ ಸಮಾವೇಶ ವೀಕ್ಷಿಸಿ Subscribers ಮಾಡಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಸಂಯೋಜಕರಾದ ಡಾ. ಜಯರಾಜ್.ಎನ್ ಇವರು ಇತಿಹಾಸದ ಮಹತ್ವ ಮತ್ತು ಸಂಪನ್ಮೂಲಗಳ ವ್ಯಕ್ತಿಗಳ ಹಿರಿತನದ ಸೇವಾ ಬದುಕಿನ ಮೌಲ್ಯಗಳ ಕುರಿತು ಮಾತನಾಡಿದರು.ಅವರ ಜೀವನ ವಿಧಾನವೇ ಅವರ 86 ವರ್ಷದ ಈ ಕ್ರಿಯಾಶೀಲತೆಗೆ ಸಾಕ್ಷಿ ಎನ್ನುತ್ತಾ ಅವರ ಬದುಕು ಸ್ಫೂರ್ತಿಯಾಗಲಿ ಎಂದು ಆಶಿಸಿದರು.ಸಂಪನ್ಮೂಲ ವ್ಯಕ್ತಿಯನ್ನು ಗೌರವಿಸಲಾಯಿತು. ಇತಿಹಾಸ ಕುರಿತ ಪ್ರಬಂಧ ಮತ್ತು ಘೋಷಣಾ ವಾಕ್ಯ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ಇತಿಹಾಸ ವಿಭಾಗದ ಮುಖ್ಯಸ್ಥರು, ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ಸಂಚಾಲಕರಾದ ಡಾ.ಸೀತಾರಾಮ.ಪಿ ಇವರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.ಡಾ.ನೂರಂದಪ್ಪ ಇವರು ಧನ್ಯವಾದ ಸಮರ್ಪಿಸಿದರು,ಡೀನಾ ಪಿ.ಪಿ.ಇವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಚಂದ್ರಕಲಾ.ಬಿ ಇವರು ಕಾರ್ಯಕ್ರಮ ನಿರೂಪಿಸಿದರು.

 

—ಜಾಹೀರಾತು—

Leave a Reply

error: Content is protected !!