ಶಾಂತಿನಗರ ಗೋಳಿತ್ತೊಟ್ಟು ಶಾಲೆ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ಗೋಳಿತ್ತೊಟ್ಟು ಶಾಂತಿನಗರ ಪ್ರಾಥಮಿಕ ಶಾಲೆಯು ಬಜತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ಮೊದಲ ಸಮಗ್ರ ಬಹುಮಾನ ಹಾಗೂ ಹಿರಿಯ ವಿಭಾಗದಲ್ಲಿ ಮೂರನೇ ಸ್ಥಾನ ಪಡೆಯುವುದರೊಂದಿಗೆ ಒಟ್ಟು 8 ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆ ಹಾಗೂ 4 ದ್ವಿತೀಯ ಸ್ಥಾನ ಮತ್ತು 4 ತೃತೀಯ ಸ್ಥಾನ ವನ್ನು ಪಡೆದುಕೊಂಡಿತು.

ಬಜತ್ತೂರು ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮೌಲ್ಯ ಅಭಿನಯ ಗೀತೆ ಮತ್ತು ದೇಶಭಕ್ತಿ ಗೀತೆಯಲ್ಲಿ ಪ್ರಥಮ, ಮಾನ್ಯ ಭಕ್ತಿಗೀತೆ ಪ್ರಥಮ, ಇಂಗ್ಲಿಷ್ ಕಂಠಪಾಠ ದ್ವಿತೀಯ, ತೃಪ್ತಿ ಆಶುಭಾಷಣ ಪ್ರಥಮ, ಪೃಥ್ವಿ ಛದ್ಮವೇಷ ಪ್ರಥಮ, ಮಹಮ್ಮದ್ ಝಾಮೀರ್ ಚಿತ್ರಕಲೆ ಪ್ರಥಮ, ಆರಾಧ್ಯ ಕಥೆ ಹೇಳುವುದರಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡರು.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಿಧಿ ಚಿತ್ರಕಲೆಯಲ್ಲಿ ಪ್ರಥಮ, ರಕ್ಷಿತ್ ಕ್ಲೇ ಮಾಡೆಲಿಂಗ್ ಪ್ರಥಮ, ಧೃತಿ ಪ್ರಬಂಧ ದ್ವಿತೀಯ ಮತ್ತು ಇಂಗ್ಲೀಷ್ ಕಂಠಪಾಠ ತೃತೀಯ, ದೀಕ್ಷಾ ಕನ್ನಡ ಕಂಠಪಾಠ ದ್ವಿತೀಯ ಮತ್ತು ಚಿತ್ರಕಲೆಯಲ್ಲಿ ತೃತೀಯ, ಚೈತ್ರಾ ಹಿಂದಿ ಕಂಠಪಾಠ ತೃತೀಯ, ಮತ್ತು ಮನೀಷ್ ಆಶುಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಈ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಶಿಕ್ಷಕ ಪ್ರದೀಪ್ ಬಾಕಿಲ, ಸಹ ಶಿಕ್ಷಕರಾದ ಮಂಜುನಾಥ್ ಮಣಕವಾಡ, ಪ್ರಮೀಳಾ, ಸುನಂದಾ ಹಾಗೂ ಮೋಹಿನಿ ಮಾರ್ಗದರ್ಶನ ನೀಡಿರುತ್ತಾರೆ.

Leave a Reply

error: Content is protected !!