ಮಂಗಳೂರಿನ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಅಲೋಶಿಯನ್ ಫೆಸ್ಟ್’ ನಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ವಿವಿಧ ವಿಭಾಗಗಳಲ್ಲಿ ಬಹುಮಾನ ಗಳಿಸಿ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿದೆ.
ಟರ್ನ್ ಕೋಟ್ ಸ್ಪರ್ಧೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಸುಮೇಧ ಗಾಂವ್ಕಾರ್ ಪ್ರಥಮ, ಸಾಮಾನ್ಯ ಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಕಲಾ ವಿಭಾಗದ ಪ್ರಣವ್ ಕೃಷ್ಣ ಮತ್ತು ತೇಜನ್ ಪ್ರಥಮ, ಬೆಂಕಿ ಇಲ್ಲದೆ ಅಡುಗೆ ಮಾಡುವ ಸ್ಪರ್ಧೆಯಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಅನ್ಸುಲಾ ಮತ್ತು ಅರ್ಪಿತಾ ಪ್ರಥಮ, ಮೇಡ್ ಆಡ್ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿಬಿನ್, ಹರ್ಷಲ್, ಅಮೋಘ, ದಾನುಷ್, ರೋಹಿತ್, ಪವನ್ ಕುಮಾರ್ ಜೈನ್, ಮನ್ವಿತ್ ಶೆಟ್ಟಿ, ಮಯೂರ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ದ್ವಿತೀಯ ಕಲಾ ವಿಭಾಗದ ಗುರುದತ್ತ ಮರಾಠೆ, ಕಾರ್ತಿಕ್, ತೇಜನ್, ಪ್ರನ್ವಿತ್ ಪ್ರಥಮ ಕಲಾ ವಿಭಾಗದ ನಿಜ ಕುಲಾಲ್, ಪ್ರಣವ್ ಕೃಷ್ಣ ತೃತೀಯ,ಶಾರ್ಕ್ ಟ್ಯಾಂಕ್ ಸ್ಪರ್ಧೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಪ್ರಿಯದರ್ಶಿನಿ ಮತ್ತು ಆರ್ಯ ದಿನೇಶ್ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.