ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ಆಶ್ರಯದಲ್ಲಿ ನೆಲ್ಯಾಡಿ ಜೇಸಿಐ ನ 41ನೇ ವರ್ಷದ ಜೇಸಿ ಸಪ್ತಾಹ ‘ಡೈಮಂಡ್-2024’ 4ನೇ ದಿನವಾದ ಸೆ.12ರಂದು ಯುವ ಸ್ಪಂದನ ದಿನದ ಅಂಗವಾಗಿ ಪ್ರತಿಭಾ ಪುರಸ್ಕಾರ, ಯುವಕರ ಮುಂದಿನ ಸವಾಲುಗಳು ಹಾಗೂ ವ್ಯಕ್ತಿ ಮಾರ್ಗದರ್ಶನ ಶಿಬಿರ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ನೆಲ್ಯಾಡಿ ಜೇಸಿ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಜೇಸಿಐ ಭಾರತ ವಲಯ ತರಬೇತುದಾರ ನಾರಾಯಣ ಎನ್. ಬಲ್ಯ ಹಾಗೂ ನೆಲ್ಯಾಡಿ ವಿವಿ ಘಟಕ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ನೂರಂದಪ್ಪ ಅವರು ಮಾಹಿತಿ ನೀಡಿದರು. ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಕುರಿಯಕೋಸ್, ಜೇಸಿ ಪೂರ್ವವಲಯಾಧಿಕಾರಿ ಪ್ರಶಾಂತ್ ಸಿ.ಹೆಚ್., ನೆಲ್ಯಾಡಿ ಜೇಸಿ ಪೂರ್ವಾಧ್ಯಕ್ಷ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಗೌರವ್ ಮತ್ತು ಗೋಪಿಕಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೆಜೆಸಿ ಅಧ್ಯಕ್ಷ ಶಮಂತ್ ಜೇಸಿ ವಾಣಿ ವಾಚಿಸಿದರು. ಸುಚಿತ್ರಾ ಜೆ.ಬಂಟ್ರಿಯಾಲ್ ಸ್ವಾಗತಿಸಿ, ನಿರೂಪಿಸಿದರು. ನೆಲ್ಯಾಡಿ ಜೇಸಿ ಪೂರ್ವಾಧ್ಯಕ್ಷ ಜೋನ್ ಪಿ.ಎಸ್.ವಂದಿಸಿದರು. ಯೋಜನಾ ನಿರ್ದೇಶಕ ಜೇಸಿ ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ಜೇಸಿ ಪೂರ್ವಾಧ್ಯಕ್ಷ ಲಕ್ಷ್ಮಣ ಜಿ.ಎ., ಜೇಸಿ ಸದಸ್ಯರಾದ ಅಬ್ದುಲ್ ರಹಿಮಾನ್, ವಿನ್ಯಾಸ್ ಬಂಟ್ರಿಯಾಲ್ ಉಪಸ್ಥಿತರಿದ್ದರು.