ನೆಲ್ಯಾಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ(ರಿ) ಆಡಳಿತಕ್ಕೆ ಒಳಪಟ್ಟ ಕಾಂಚನ ಪ್ರೌಢಶಾಲೆಯಲ್ಲಿ ಜಿಲ್ಲಾಮಟ್ಟದ ಜಂಪ್ ರೋಪ್ ಸ್ಪರ್ಧೆ ನಡೆಯಿತು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಭುವನೇಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಜಂಪ್ ರೋಪ್ ನ ಬಗ್ಗೆ ಮಾಹಿತಿ ನೀಡಿ ಮಕ್ಕಳಿಗೆ ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ಎಸ್ ಡಿ ಎಂ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ಎಡಪದವು ನಿರ್ದೇಶಕ ಪ್ರೇಮನಾಥ್, ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಕೃಷ್ಣಾನಂದ, ಪುತ್ತೂರು ತಾಲೂಕು ದೖಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಎಸ್ ಡಿ ಎಂ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ಎಸ್ ಡಿ ಎಂ ಪದವಿ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಅವರು ಸ್ಪರ್ಧೆಗೆ ಶುಭ ಹಾರೈಸಿದರು. ಶಾಲೆಗೆ ಧನಸಹಾಯ ನೀಡಿದ ಪೋಷಕ, ದಾನಿ ಶಂಕರನಾರಾಯಣ ನಾಯಕ್ ಯಾದವ ನೆಕ್ಕರೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನಯನ, ವಿಕ್ರಂ ಯುವಕ ಮಂಡಲದ ಅಧ್ಯಕ್ಷ ರಾಮಚಂದ್ರ, ಕಾಂಚನ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಗೌಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಲಯ ನೋಡಲ್ ಅಧಿಕಾರಿಗಳಾದ ಗಂಗಾಧರ ಮತ್ತು ಕುಶಾಲಪ್ಪ ಅವರು ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು.
ಶಾಲೆಗೆ ಧನಸಹಾಯ ನೀಡಿದ ಪೋಷಕರು ದಾನಿ ಶಂಕರನಾರಾಯಣ ನಾಯಕ್ ಯಾದವ ನೆಕ್ಕರೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ನಯನ, ವಿಕ್ರಂ ಯುವಕಮಂಡಲದ ಅಧ್ಯಕ್ಷ ರಾಮಚಂದ್ರ, ಕಾಂಚನ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಗೌಡ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಟ್ಟು ಜಿಲ್ಲೆಯ ಆರು ತಾಲೂಕಿನಿಂದ 48 ಪ್ರೌಢಶಾಲೆಗಳು, 42 ಪ್ರಾಥಮಿಕ ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ತಾಲೂಕಿನಿಂದ 38 ವಿದ್ಯಾರ್ಥಿಗಳು, ಬೆಳ್ತಂಗಡಿಯಿಂದ 10 ವಿದ್ಯಾರ್ಥಿಗಳು, ಮೂಡಬಿದ್ರೆಯಿಂದ 95 ವಿದ್ಯಾರ್ಥಿಗಳು, ಬಂಟ್ವಾಳದಿಂದ 86 ವಿದ್ಯಾರ್ಥಿಗಳು, ಮಂಗಳೂರು ಉತ್ತರದಿಂದ 84 ವಿದ್ಯಾರ್ಥಿಗಳು, ಮಂಗಳೂರು ತಾಲೂಕಿನಿಂದ 72 ವಿದ್ಯಾರ್ಥಿಗಳು, ಸುಳ್ಯ ತಾಲೂಕಿನಿಂದ ಮೂರು ವಿದ್ಯಾರ್ಥಿಗಳು, ಒಟ್ಟು 388 ವಿದ್ಯಾರ್ಥಿಗಳು, ಒಟ್ಟು 57 ಶಿಕ್ಷಕ ವ್ಯವಸ್ಥಾಪಕರಾಗಿ ಆಗಮಿಸಿದ್ದರು.
ಶಾಲೆಯ ಮುಖ್ಯಶಿಕ್ಷಕ ರಮೇಶ್ ಮಯ್ಯ ಸ್ವಾಗತಿಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಕಾರಂತ್.ಪಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಜಾತ ವಂದಿಸಿದರು.