ನೆಲ್ಯಾಡಿ ಜೇಸಿ ಸಪ್ತಾಹ ‘ಡೈಮಂಡ್-2024’ ಯುವ ದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಅಧ್ಯಕ್ಷೆ ಸುಚಿತ್ರಾ ಜೆ.ಬಂಟ್ರಿಯಾಲ್ ವಹಿಸಿದ್ದರು. ಜೇಸಿ ವಲಯ 15ರ ವಲಯಾಧ್ಯಕ್ಷ ಗಿರೀಶ್ ಎಸ್.ಪಿ., ಅವರು ಮಾತನಾಡಿ ಯುವ ಜನತೆ ಜೇಸಿಯಲ್ಲಿ ಹೆಚ್ಚು ತೊಡಗಿಕೊಳ್ಳಬೇಕೆಂದು ಹೇಳಿದರು. ನೆಲ್ಯಾಡಿ ಜೇಸಿಐ ಹೆಚ್ಚು ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ವಲಯ ಉಪಾಧ್ಯಕ್ಷ ಅಭಿಷೇಕ್, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್., ಕರ್ನಾಟಕ ಸರಕಾರಿ ನೌಕರರ ಸಂಘದ ಕಡಬ ತಾಲೂಕು ಅಧ್ಯಕ್ಷ ವಿಮಲ್‌ಕುಮಾರ್ ಅವರು ಮಾತನಾಡಿ ಶುಭಹಾರೈಸಿದರು. ನೆಲ್ಯಾಡಿ ನ್ಯೂ ಸ್ಟೋರ್‌ನ ಮಾಲಕ ನಾಝೀಂ ಸಾಹೇಬ್, ನೆಲ್ಯಾಡಿ ಜೇಸಿಐನ ಪೂರ್ವಾಧ್ಯಕ್ಷ ಕೆ.ಯಂ.ದಯಾಕರ ರೈ, ಮಹಿಳಾ ಜೇಸಿ ಅಧ್ಯಕ್ಷೆ ಲೀಲಾ ಮೋಹನ್, ಜೆಜೆಸಿ ಅಧ್ಯಕ್ಷ ಶಮಂತ್, ವೈಷ್ಣವಿ, ಯೋಜನಾ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಪುರಂದರ ಗೌಡ ಡೆಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಚಿತ್ರಾ ಜೆ.ಬಂಟ್ರಿಯಾಲ್ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಆನಂದ ಅಜಿಲ ವಂದಿಸಿದರು. ಸುಪ್ರಿತಾ ರವಿಚಂದ್ರ ಜೇಸಿವಾಣಿ ವಾಚಿಸಿದರು. ಪೂರ್ವಾಧ್ಯಕ್ಷ ರವೀಂದ್ರ ಟಿ.ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.
ಸನ್ಮಾನ:
ಯುವ ವಾಣಿಜ್ಯೋದ್ಯಮಿ ನೆಲ್ಯಾಡಿ ಮಧುಶ್ರೀ ಅರ್ಥ್ ಮೂವರ‍್ಸ್ ಮಾಲಕ ಧನಂಜಯ ಹಾಗೂ ಸಾಧನಾಶ್ರೀ ಪ್ರಶಸ್ತಿ ಪುರಸ್ಕೃತ ನೆಲ್ಯಾಡಿ ಜೇಸಿಐನ ಪೂರ್ವಾಧ್ಯಕ್ಷ ಇಸ್ಮಾಯಿಲ್ ಕೆ. ಅವರನ್ನು ಜೇಸಿಐ ವತಿಯಿಂದ ಗೌರವಿಸಲಾಯಿತು.
ಶಾಶ್ವತ ಯೋಜನೆಗಳ ಹಸ್ತಾಂತರ :
ಪುಚ್ಚೇರಿ ಶಾಲೆಗೆ ಕೈತೊಳೆಯುವ ಬೇಸಿನ್, ನೆಲ್ಯಾಡಿ ಪಿಎಂಶ್ರೀ ಶಾಲೆಗೆ ಬೇಬಿ ಚಯರ್, ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಗೆ ಫ್ಯಾನ್ ಹಾಗೂ ಕೊಡುಗೆಯಾಗಿ ನೀಡಲಾಯಿತು. ಜೇಸಿ ವಲಯಾಧ್ಯಕ್ಷ ಗಿರೀಶ್ ಎಸ್.ಪಿ.ಅವರು ಕೊಡುಗೆ ಹಸ್ತಾಂತರಿಸಿದರು.