ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕಡಬ ತಾಲೂಕು ಮಟ್ಟದ ಪದವಿಪೂರ್ವ ಬಾಲಕ ಮತ್ತು ಬಾಲಕಿಯರ ಖೋ ಖೋ ಪಂದ್ಯಾಟವು ನಡೆಯಿತು.
ಉದ್ಘಾಟನೆಯನ್ನು ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯ ಮತ್ತು ಸಂಸ್ಥೆಯ ಹಿರಿಯ ವಿದ್ಯಾರ್ಥಿ ಯತೀಶ್ ಬಾನಡ್ಕ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿ ಮಾತನಾಡಿದ ಅವರು “ಖೋ ಖೋ ಭಾರತದ ಆಟ. ಆಟಗಾರರಲ್ಲಿ ಶಾರೀರಿಕ ಮತ್ತು ಮಾನಸಿಕ ಸಧೃಡತೆಯನ್ನು ಪಕ್ವಗೋಳಿಸುತ್ತದೆ. ಒಬ್ಬ ವ್ಯಕ್ತಿಯ ಸರ್ತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸೋತಾಗ ಕುಗ್ಗದೇ, ಗೆದ್ದಾಗ ಹಿಗ್ಗದೇ ಇರುವ ಮನೋಭಾವ ಬೆಳೆಸಿಕೊಳ್ಳಿ, ಆಗ ನೀವೆಲ್ಲರೂ ನಿಜವಾದ ಕ್ರೀಡಾ ಪಟುವಾಗಲು ಸಾಧ್ಯ. ಎಲ್ಲರಿಗೂ ಶುಭವಾಗಲಿ” ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಭಾರತೀಯ ಸೇನೆಯ ಅಗ್ನಿವೀರ ಸೈನಿಕ ಜಯಪ್ರಕಾಶ್ ಮತ್ತು ಬೆಥನಿ ಪದವಿಪೂರ್ವ ಕಾಲೇಜಿನ ಪುನೀತ್ ಶುಭಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್.ಕೆ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಗಣೇಶ್.ಕೆ ವಂದಿಸಿದರು. ವಿದ್ಯಾರ್ಥಿಯಾದ ಗ್ರೀಷ್ಮ ಮತ್ತು ಬಳಗದವರು ಪ್ರಾರ್ಥಿಸಿದರು .ಉಪನ್ಯಾಸಕ ಚೇತನ್.ಎಂ ಕಾರ್ಯಕ್ರಮ ನಿರೂಪಿಸಿದರು.
ವಿಜೇತರು:
ಬಾಲಕರ ವಿಭಾಗದಲ್ಲಿ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿದರು.
ಬಾಲಕಿಯರ ವಿಭಾಗದಲ್ಲಿ ಬೆಥನಿಪದವಿಪೂರ್ವ ಕಾಲೇಜು ನೂಜಿಬಾಳ್ತಿಲದ ವಿದ್ಯಾರ್ಥಿನಿಯರು ಪ್ರಥಮ, ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿದರು. ಬಾಲಕರ ವಿಭಾಗದಲ್ಲಿ ಸವ್ಯಸಾಚಿ ಆಟಗಾರನಾಗಿ ಸತೀಶ ರಾಮಕುಂಜ, ಉತ್ತಮ ಹಿಡಿತಗಾರನಾಗಿ ಕಾರ್ತಿಕ್ ರಾಮಕುಂಜ , ಉತ್ತಮ ಓಟಗಾರನಾಗಿ ವೆಂಕಟೇಶ್ ಬೆಥನಿ, ಬಾಲಕಿಯರ ವಿಭಾಗದಲ್ಲಿ ಸವ್ಯಸಾಚಿ ಆಟಗಾರ್ತಿಯಾಗಿ ದಿಶಾ ಬೆಥನಿ, ಉತ್ತಮ ಹಿಡಿತಗಾರ್ತಿಯಾಗಿ ಮೋಕ್ಷ ಬೆಥನಿ, ಉತ್ತಮ ಓಟಗಾರ್ತಿಯಾಗಿ ರಕ್ಷಿತಾ ರಾಮಕುಂಜ ಸಾಧನೆಯನ್ನು ಮಾಡಿದರು.