ಕೊಕ್ಕಡ: ಡಾ.ಹರೀಶ್ ಕಲಾಯಿರವರಿಗೆ ಮಂಗಳೂರು ವಿ.ವಿ.ಯಿಂದ ಪಿ.ಎಚ್.ಡಿ ಪದವಿ

ಶೇರ್ ಮಾಡಿ

ನೇಸರ ಫೆ.27:ಬೆಳ್ತಂಗಡಿ ತಾಲೂಕಿನ ಕಲಾಯಿ ಹರೀಶ್ ಎಂಬವರು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಜಿ.ಅಕ್ವಿನಸ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಆ ಸ್ಟಡಿ ಆನ್ ಫ್ಯಾಕ್ಟರ್ಸ್ ಇನ್‍ಪ್ಲೂಯೆನ್ಸಿಂಗ್ ಕ್ವಾಲಿಟಿ ಆಫ್ ಲೈಫ್ ಎಮಂಗ್ ಸಿಂಗಲ್ ಮದರ್ಸ್ ಇನ್ ಕರ್ನಾಟಕ ಸ್ಟೇಟ್” ಎಂಬ ಮಹಾ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಎಚ್.ಡಿ(ಡಾಕ್ಟರೇಟ್)ಪದವಿ ನೀಡಿ ಗೌರವಿಸಿದೆ.
ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಿರಿಯ ಪ್ರಾಥಮಿಕ ಶಾಲೆ ಪಟ್ಟೂರು,ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸರಕಾರಿ ಪ್ರೌಢಶಾಲೆ ಕೊಕ್ಕಡದಲ್ಲಿ,ಪದವಿ ಪೂರ್ವ ಶಿಕ್ಷಣವನ್ನು ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜದಲ್ಲಿ ನಂತರ BSW ಹಾಗೂ MSW ಶಿಕ್ಷಣವನ್ನು ಆಳ್ವಾಸ್ ಕಾಲೇಜ್ ಮೂಡಬಿದ್ರೆ ಯಲ್ಲಿ ಪೂರೈಸಿರುತ್ತಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯವರಿಂದ
ಶ್ರೀ ಕ್ಷೇತ್ರ ಸೌತಡ್ಕ ದಲ್ಲಿ ಮೂಡಪ್ಪ ಸೇವೆಯ
ಅಪೂರ್ವ ಕ್ಷಣ ತಪ್ಪದೇ ವೀಕ್ಷಿಸಿ Subscribers ಮಾಡಿ

ಡಾ.ಹರೀಶ್ ಕಲಾಯಿ ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಕೊಕ್ಕಡ ಗ್ರಾಮದ ಕಲಾಯಿ ಕೃಷಿಕ ಬೊಮ್ಮಣ್ಣ ಗೌಡ ಹಾಗೂ ದೇವಕಿ.ಬಿ ದಂಪತಿಯ ಪುತ್ರ.

 

—ಜಾಹೀರಾತು—

 

Leave a Reply

error: Content is protected !!