ಭೂಮಿಯ ವಿಶಾಲ ಗರ್ಭಗುಡಿಯಲ್ಲಿ
ಪ್ರಕೃತಿ ಮಾತೆಯ ಒಡಲಿನ ತೊಟ್ಟಿಲಲ್ಲಿ
ಹಸಿರಿನ ಆಸರೆಯಲಿ…….
ಸ್ವಚ್ಛಂದ ದಿ ಜೀವಿಸುತ…
ಮುಂಜಾನೆ ಗಗನ…
ನೋಡುತಿರಲು ಕುಣಿದಾಡಿದೆ ತನು ಮನ
ಹಸಿರೆಲೆಗಳ ಮೇಲೆ ಬಿದ್ದ ಹನಿ ಹನಿ ಇಬ್ಬನಿ
ಸಾರುತಿದೆ ಮಾಡದಿರು ಸದ್ದು ನೀ…
ಹಕ್ಕಿ ಹಿಂಡುಗಳ ಹಾರಾಟ ನೋಡಲ್ಲಿ
ಸಮುದ್ರದಂತಿರುವ ಆ ನೀಲಿ ಬಾನಿನಲ್ಲಿ
ಅಲೆಗಳಂತಿರುವ ಮೋಡಗಳೆಡೆಯಲ್ಲಿ.
ಆ…ಬಾನರವಿಗೆ ಆಹ್ವಾನ ನೋಡಲ್ಲಿ
ಭುವಿಯನ್ನು ಸೋಕಲು ಸೂರ್ಯಕಿರಣ
ಆಯಿತುನಿನ್ನೆ ಎಂಬ ದಿನದ ಮರಣ..
ಆಗಿದೆ ಇಂದು ಎನ್ನುವ ಹೊಸ ದಿನದ ಜನನ
ನಾಳೆ ಎಂಬುದು ಅದು ಕಲ್ಪಿತ ಕವನ.
ಮುಂಜಾನೆಯ ವರ್ಣ ರಂಜಿತ ಸೊಬಗು
ವರ್ಣಿಸಲಾಗದೆ ಮೌನವಾಗಿದೆ ಒಡಲು
ಕಣ್ಣ ರೆಪ್ಪೆ ಮಿಟುಕಿಸದೆ……
ಮುಖದಲ್ಲಿಮೂಡಿದೆಯೊಂದು ಕಿರು ನಗು
ಪದಗಳಿಗೆ ನಿಲುಕದ ಪ್ರಕೃತಿ ಸೌಂದರ್ಯ
ಇದು ಬೆಲೆಕಟ್ಟಲಾಗದ ಐಶ್ವರ್ಯ
ಮುಂಜಾನೆಯ ಸೊಬಗಿನಲಿ ಮಿಂದ ನಾನು
ಅದ ವರ್ಣಿಸಲಾಗದೆ ಮೂಕನಾಗಿಹೆನು.
✍🏻 ವಿಜೇತ, ಪ್ರಥಮ ಕಲಾ ವಿಭಾಗ
ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜು