ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶನೇಶ್ವರ ಪೂಜೆ ಮತ್ತು ಧಾರ್ಮಿಕ ಉಪನ್ಯಾಸ

ಶೇರ್ ಮಾಡಿ

ನೇಸರ ಮಾ.01:ಹಿಂದೂ ಜಾಗರಣ ವೇದಿಕೆ ಮತ್ತು ಶಿವಾಜಿ ಯಂಗ್ ಬಾಯ್ಸ್ ಕೊಕ್ಕಡ ಇದರ ವತಿಯಿಂದ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶನೀಶ್ವರ ಪೂಜೆ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಫೆ.26ರಂದು ಶನಿವಾರ ಬೆಳಗ್ಗೆ ಬಾಲಕೃಷ್ಣ ಕೆದಿಲಾಯ ಪೌರೋಹಿತ್ಯದಲ್ಲಿ ಶನೇಶ್ವರ ಕಲ್ಪೋಕ್ತ ಪೂಜೆ ನಡೆಯಿತು.ನಂತರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಈಶ್ವರ ಭಟ್ ಹಿತ್ತಿಲು ಮನೆ ವಹಿಸಿದ್ದರು.ಅಂಬಿಕಾ ವಿದ್ಯಾಲಯ ಪುತ್ತೂರು ಇದರ ಉಪನ್ಯಾಸಕ ಶ್ರೀಕೃಷ್ಣ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ನೀಡಿದರು ಹಿಂದೂ ಸಂಸ್ಕೃತಿಯನ್ನು ಉಳಿಸಿದ ಎರಡು ಸಾಮ್ರಾಜ್ಯಗಳು ಮರಾಠ ಮತ್ತು ವಿಜಯನಗರ ಸಾಮ್ರಾಜ್ಯಗಳು.ಛತ್ರಪತಿ ಶಿವಾಜಿ ಯುವಕರ ಹೃದಯ ಸಾಮ್ರಾಜ್ಯದಲ್ಲಿ ಪ್ರತಿಷ್ಟಾಪಿಸಬೇಕಾದ ಅಜೇಯ ವ್ಯಕ್ತಿತ್ವ. ಶಿವಾಜಿಯ ಹೋರಾಟ, ಸಂಘಟನಾ ಶಕ್ತಿಯಿಂದಾಗಿ ಇಂದು ಹಿಂದೂ ಸಮಾಜ ಜಾಗ್ರತಗೊಳ್ಳುತಿದೆ.ಮತಾಂಧ ಶತ್ರುಗಳನ್ನು ದೂರವಿಟ್ಟು,ಕ್ರಿಯಾಶೀಲ ಜಾಗೃತ ಸಮಾಜ ನಿರ್ಮಾಣವಾ ದರೆ ಮಾತ್ರ ನಾವೆಲ್ಲ ನೆಮ್ಮದಿಯಿಂದ ಬದುಕಬಹುದು ಎಂದರು.
ವೇದಿಕೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ,ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ನರಸಿಂಹ.ಶೆಟ್ಟಿ ಮಾಣಿ, ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಅಲಂಬಿಲ,ಯಶೋಧರ ಬೆಳಾಲು ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ,ಅಜಿತ್ ಹೊಸಮನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುತ್ತೂರು ತಾಲೂಕು,ಕೊಕ್ಕಡ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಸಚಿನ್ ಬಜ ಮೊದಲಾದವರು ಉಪಸ್ಥಿತರಿದ್ದರು.ಸಚಿನ್ ಬಜ ಸ್ವಾಗತಿಸಿ.ಕೇಶವ ಧನ್ಯವಾದ ಸಮರ್ಪಿಸಿ.ಸುಧೀರ್ ಕುಮಾರ್ ನಿರೂಪಿಸಿದರು.

ಯಕ್ಷಗಾನ ವೀಕ್ಷಿಸಿ Subscribers ಮಾಡಿ

ಸನ್ಮಾನ
150ಕ್ಕೂ ಮಿಕ್ಕಿ ಗ್ರೇಟ್ ಮಾದರಿ ಹಗ್ಗಜಗ್ಗಾಟ ಪಂದ್ಯಾಟವನ್ನು ಯಶಸ್ವಿಯಾಗಿ ನಿರ್ವಹಿಸಿದ ಸಾಧನೆಗಾಗಿ ನಿರೂಪಕ ಸುರೇಶ್ ಪಡಿಪಂಡ ಹಾಗೂ ಸ್ವಚ್ಛತೆಯ ಹಾದಿಯಲ್ಲಿ ಹಗಲಿರುಳು ಎನ್ನದೆ ತನ್ನನ್ನು ತಾನು ತೊಡಗಿಸಿಕೊಂಡಿರುವ ಮಹಾವೀರ ಕಾಲೋನಿಯ ಶ್ರೀಮತಿ ಮಗ್ಗಿ ಇವರನ್ನು ಗುರುತಿಸಿ ಸಾಮಾಜಿಕ ಕಾರ್ಯಕರ್ತ ಹೋಳಿಗೆ ಮನೆ ಕೊಕ್ಕಡ ಇದರ ಮಾಲಕರಾದ ಪ್ರಹ್ಲಾದ್ ಮರಾಠೆ ದಂಪತಿಗಳ ಪರವಾಗಿ ಸನ್ಮಾನಿಸಲಾಯಿತು.

—ಜಾಹೀರಾತು—

Leave a Reply

error: Content is protected !!