ನೇಸರ ಮಾ.01:ನೆಲ್ಯಾಡಿ ರಾಮನಗರ ಬಲ್ಯದಲ್ಲಿ ಶಿವಾಜಿ ಜಯಂತಿಯ ಅಂಗವಾಗಿ ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ನೆಲ್ಯಾಡಿ ಘಟಕ ಹಾಗೂ ಹಿಂದೂ ಯುವವಾಹಿನಿ ಇವರ ನೇತೃತ್ವದಲ್ಲಿ ಫೆ.27ರಂದು “ಶಿವಾಜಿ ಟ್ರೋಫಿ-2022” ಕ್ರೀಡಾಕೂಟ ನಡೆಯಿತು.ದೊಂತಿಲ ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ನೂಜಿನ್ನಾಯರು ಕಬಡ್ಡಿ ರೈಡಿಂಗ್ ಮಾಡುವುದರ ಮೂಲಕ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿ ಶುಭ ಹಾರೈಸಿದರು.ನೆಲ್ಯಾಡಿ ಗ್ರಾಮಪಂಚಾಯತ್ ಸದಸ್ಯ ರವಿಪ್ರಸಾದ್ ಶೆಟ್ಟಿ,ಉದಯಕುಮಾರ್ ಗೌಡ ಮೊದಲಾದವರು ಪಾಲ್ಗೊಂಡರು.
ಬೆಳಗ್ಗೆ 9.00 ರಿಂದ ಆರಂಭವಾದ ಕ್ರೀಡಾಕೂಟ ರಾತ್ರಿ 9.00 ರವರೆಗೆ ನಡೆಯಿತು.ವಿವಿಧ ವಿಭಾಗಗಳಲ್ಲಿ ತ್ರೋಬಾಲ್,ಕಬಡ್ಡಿ,ವಾಲಿಬಾಲ್,ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು.ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಘಟಕದ ಅಧ್ಯಕ್ಷರಾದ ಯಶವಂತ.ಪಿ ಸಭಾಧ್ಯಕ್ಷತೆಯನ್ನು ವಹಿಸಿದರು ಹಿಂದು ಜಾಗರಣ ವೇದಿಕೆ ಅಧ್ಯಕ್ಷರಾದ ಮಲ್ಲೇಶ್ ಆಲಂಗಾರು,ಪ್ರಧಾನ ಕಾರ್ಯದರ್ಶಿ ರವೀಂದ್ರ ದಾಸ್ ಕುಂತೂರು, ಚಂದ್ರಶೇಖರ.ರೈ ರಾಮನಗರ ಬಲ್ಯ, ಹಿಂದೂ ಜಾಗರಣ ವೇದಿಕೆ ನೆಲ್ಯಾಡಿಯ ಮಾಜಿ ಅಧ್ಯಕ್ಷರಾದ ರವಿ ಪ್ರಸಾದ್ ಶೆಟ್ಟಿ,ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಅನಿಲ್.ರೈ ಹಾರ್ಪಳ,ಕಡಬ ತಾಲೂಕು ಹಿಂದೂ ಜಾಗರಣ ವೇದಿಕೆ ಉಸ್ತುವಾರಿ ಅವಿನಾಶ ಜೋಗಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ನರಸಿಂಹ ಶೆಟ್ಟಿ ಮಾಣಿ ಮಾತನಾಡಿ ವ್ಯಕ್ತಿಗಾಗಿ ಸಂಘಟನೆಯಲ್ಲ ಸಮಾಜಕ್ಕಾಗಿ ಸಂಘಟನೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಭಾಗವಾಗಿರುವ ಹಿಂದೂ ಜಾಗರಣ ವೇದಿಕೆ ಸಾಮಾಜಿಕವಾಗಿ ಹಿಂದೂ ಸಮುದಾಯವನ್ನು ಬಿಂಬಿಸುವ ಕಾರ್ಯದಲ್ಲಿದೆ,ಹಿಂದೂ ಸಾಮ್ರಾಜ್ಯ ಏಳಿಗೆಗಾಗಿ ಶ್ರಮಿಸುವ ಶಿವಾಜಿಯಂತಹ ಮಹಾತ್ಮರನ್ನು ನೆನೆಯಬೇಕಾದುದು ನಮ್ಮ ಕರ್ತವ್ಯ, ಮತಾಂಧ ಶಕ್ತಿಗಳನ್ನು ದೂರ ತಳ್ಳಿ ಹಿಂದೂ ಸಮಾಜದಲ್ಲಿ ಯುವಜನತೆ ಕಟಿಬದ್ಧವಾಗ ಬೇಕಿದೆ,ಜನಪರ ಕಾರ್ಯಗಳ ಮೂಲಕ ನೆಲ್ಯಾಡಿ ಹಿಂದೂ ಜಾಗರಣ ವೇದಿಕೆ ಘಟಕ ಉತ್ತಮ ಕೆಲಸವನ್ನು ನಡೆಸುತ್ತಿದೆ ಎಂದು ನುಡಿದರು.
ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ವಿನೋದ್.ರೈ ಯವರು ನೆಲ್ಯಾಡಿ ಹಿಂದೂ ಜಾಗರಣ ವೇದಿಕೆ ಘಟಕ ಬಡವರಿಗೆ ಮನೆ ನಿರ್ಮಾಣಕ್ಕೆ ಸಹಾಯ,ಕೋರೋನಾ ಸಂಕಷ್ಟದಲ್ಲಿ ನಿರಂತರ ಹಿಂದೂ ಸಮಾಜಕ್ಕಾಗಿ ಸ್ಪಂದನೆ,ನಿರುಪಯುಕ್ತ ಗೋವುಗಳನ್ನು ಗೋಶಾಲೆಗೆ ಹಸ್ತಾಂತರಿಸುವಂತಹ ಕಾರ್ಯದಲ್ಲಿ ಪಾಲ್ಗೊಂಡಿದೆ ಎಂದರು.ಅಶೋಕ ವಂದೇಮಾತರಂ ಹಾಡಿದರು,ವಂದನ್ ದನ್ಯವಾದ ನೀಡಿದರು.ಶೀನಪ್ಪ ಕಾರ್ಯಕ್ರಮ ನಿರೂಪಿಸಿದರ. ಕ್ರೀಡಾಕೂಟದ ನಿರೂಪಣೆಯನ್ನು ಸುರೇಶ್ ಪಡಿಪಂಡ ನೆರವೇರಿಸಿದರು. ದೀಪಕ್ ಸಹಕರಿಸಿದರು.ಕ್ರೀಡಾಕೂಟದ ತೀರ್ಪುಗಾರರಾಗಿ ರಾಜೇಶ್, ಪ್ರಮೋದ್, ರವೀಂದ್ರ ವೇಲು,ಲಕ್ಷ್ಮಣ್,ಕಿರಣ್ ಪುತ್ತಿಲ ಸಹಕರಿಸಿದರು.
—ಜಾಹೀರಾತು—