ನೆಲ್ಯಾಡಿ: ಉದನೆ ಸಮೀಪದ ಎಂಜಿರ ಎಂಬಲ್ಲಿ ನ.29ರ ಮಧ್ಯರಾತ್ರಿ ಕೆ.ಸಿ.ಕುರಿಯನ್ ಎಂಬುವರ ಕೃಷಿ ತೋಟಕ್ಕೆ ಕಾಡಾನೆ ದಾಳಿ.
ಆನೆ ದಾಳಿಯಿಂದ ಸುಮಾರು 50 ಕ್ಕಿಂತ ಹೆಚ್ಚು ಫಲ ಬರುವ ಅಡಿಕೆ ಹಾಗೂ ಬಾಳೆ ಗಿಡಗಳನ್ನು ಹಾನಿಗೊಳಿಸಿವೆ. ಬಡ ರೈತರಾದ ಇವರು ಇದರಿಂದಾಗಿ ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ರಾತ್ರಿ ಪ್ರಯಾಣುತ್ತಿದ್ದ ಪ್ರಯಾಣಿಕರೊಬ್ಬರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಏಳೆಂಟು ಆನೆಗಳು ನಿಂತಿರುವುದರ ಬಗ್ಗೆ ತಿಳಿಸಿದರು. ಕಳೆದ ಕೆಲವು ಸಮಯಗಳಿಂದ ಕಾಡಾನೆಗಳು ಪದೇ ಪದೇ ಕೃಷಿ ತೋಟಗಳಿಗೆ ದಾಳಿ ನಡೆಸಿ ಹಾನಿಗೊಳಿಸುತ್ತಿವೆ. ಅಡಿಂಜೆ ದೇವಸ್ಥಾನದ ಕಡೆಯಿಂದ ಕಾಡಾನೆ ಬಂದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಕಾಡಾನೆಗಳು ನಿರಂತರ ದಾಳಿ ನಡೆಸಿ ಅಡಿಕೆ, ತೆಂಗು, ಬಾಳೆ ಗಿಡಗಳನ್ನು ನಾಶಗೊಳಿಸುತ್ತಿವೆ. ಇಲ್ಲಿಂದ ಕಾಡಾನೆಗಳ ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಪದೇಪದೇ ಅರಣ್ಯ ಇಲಾಖಾಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.